ADVERTISEMENT

ಕೆನಡಾ ರಾಜತಾಂತ್ರಿಕ ಸಿಬ್ಬಂದಿ ಸಂಖ್ಯೆ ಕಡಿತ: ವಿಯೆನ್ನಾ ಒಪ್ಪಂದದಂತೆ ಕ್ರಮ- ಭಾರತ

​ಪ್ರಜಾವಾಣಿ ವಾರ್ತೆ
Published 12 ಅಕ್ಟೋಬರ್ 2023, 18:56 IST
Last Updated 12 ಅಕ್ಟೋಬರ್ 2023, 18:56 IST
New Delhi:  Spokesperson of the Ministry of External Affairs Arindam Bagchi during the Weekly Media Briefing, in New Delhi, on Friday, June 02, 2023.  (Photo: IANS/Twitter)
New Delhi: Spokesperson of the Ministry of External Affairs Arindam Bagchi during the Weekly Media Briefing, in New Delhi, on Friday, June 02, 2023. (Photo: IANS/Twitter)   

ನವದೆಹಲಿ: ಕೆನಡಾ ರಾಜತಾಂತ್ರಿಕ ಸಿಬ್ಬಂದಿ ಸಂಖ್ಯೆಯನ್ನು ಕಡಿತಗೊಳಿಸುವ ತನ್ನ ನಿರ್ಧಾರವು ರಾಜತಾಂತ್ರಿಕ ಸಂಬಂಧಗಳ ಕುರಿತ ವಿಯೆನ್ನಾ ಒಪ್ಪಂದವನ್ನು ಆಧರಿಸಿ ಕೈಗೊಂಡಿರುವ ಕ್ರಮವಾಗಿದೆ ಎಂದು ಭಾರತ ಗುರುವಾರ ಹೇಳಿದೆ.

ಉಭಯ ದೇಶಗಳು ಸಮಾನ ಸಂಖ್ಯೆಯಲ್ಲಿ ರಾಜತಾಂತ್ರಿಕ ಸಿಬ್ಬಂದಿಯನ್ನು ಹೊಂದಿರುವುದು ಅಗತ್ಯ ಎಂದು ವಿದೇಶಾಂಗ ಸಚಿವಾಲಯದ ವಕ್ತಾರ ಅರಿಂದಮ್‌ ಬಾಗ್ಚಿ ಪ್ರತಿಪಾದಿಸಿದ್ದಾರೆ.

ಖಾಲಿಸ್ತಾನ ಪರ ಪ್ರತ್ಯೇಕತಾವಾದಿ ನಾಯಕ ಹರ್ದೀಪ್‌ ಸಿಂಗ್‌ ನಿಜ್ಜರ್‌ ಹತ್ಯೆಗೆ ಸಂಬಂಧಿಸಿ ಭಾರತ ವಿರುದ್ಧ ಕೆನಡಾ ಆರೋಪ ಮಾಡಿದ ನಂತರ ಉಭಯ ದೇಶಗಳ ನಡುವೆ ಉದ್ಭವಿಸಿರುವ ರಾಜತಾಂತ್ರಿಕ ಬಿಕ್ಕಟ್ಟು ಮುಂದುವರಿದಿದೆ.

ADVERTISEMENT

ಅಲ್ಲದೇ, ಭಾರತದಲ್ಲಿನ ತನ್ನ ರಾಜತಾಂತ್ರಿಕ ಸಿಬ್ಬಂದಿ ಪೈಕಿ  41 ಮಂದಿಯನ್ನು ಹಿಂದಕ್ಕೆ ಕರೆಸಿಕೊಳ್ಳುವಂತೆ ಇತ್ತೀಚೆಗೆ ಗಡುವು ನೀಡಿತ್ತು. ಇದರ ಬೆನ್ನಲ್ಲೇ, ನವದೆಹಲಿ ಹೊರತುಪಡಿಸಿ ಉಳಿದೆಡೆ ಇದ್ದ ರಾಜತಾಂತ್ರಿಕರನ್ನು ಸಿಂಗಪುರ ಹಾಗೂ ಕ್ವಾಲಾಲಂಪುರಕ್ಕೆ ಕೆನಡಾ ಸ್ಥಳಾಂತರಗೊಳಿಸಿತ್ತು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.