ADVERTISEMENT

‘ಇವಿಎಂ –ವಿವಿಪ್ಯಾಟ್‌ ಫಲಿತಾಂಶ ಹೋಲಿಸಿ’

ಚುನಾವಣಾ ಆಯೋಗಕ್ಕೆ ವಿರೋಧ ಪಕ್ಷಗಳ ನಾಯಕರ ಮನವಿ

ಪಿಟಿಐ
Published 4 ಫೆಬ್ರುವರಿ 2019, 18:49 IST
Last Updated 4 ಫೆಬ್ರುವರಿ 2019, 18:49 IST
   

ನವದೆಹಲಿ: ವಿದ್ಯುನ್ಮಾನ ಮತಯಂತ್ರಗಳನ್ನು (ಇವಿಎಂ) ತಿರುಚುವ‍ಪ್ರಕರಣಗಳಿಗೆ ಪರಿಹಾರ ಕಂಡುಕೊಳ್ಳುವಂತೆ ವಿರೋಧ ಪಕ್ಷಗಳು ಸೋಮವಾರ ಚುನಾವಣಾ ಆಯೋಗಕ್ಕೆ ಮನವಿ ಮಾಡಿವೆ.

ಮುಂದಿನ ಲೋಕಸಭಾ ಚುನಾವಣೆ ವೇಳೆ, ಶೇ 50ರಷ್ಟು ಇವಿಎಂ ಫಲಿತಾಂಶವನ್ನು ವಿವಿಪ್ಯಾಟ್‌ನೊಂದಿಗೆ ಹೋಲಿಕೆ ಮಾಡಬೇಕು. ಎರಡೂ ಯಂತ್ರಗಳಲ್ಲಿನ ಮಾಹಿತಿ ಸರಿಯಾಗಿದ್ದರೆ ಮಾತ್ರ ಫಲಿತಾಂಶ ಘೋಷಿಸಬೇಕು ಎಂದು ವಿರೋಧಪಕ್ಷಗಳ ನಾಯಕರು ಒತ್ತಾಯಿಸಿದರು.

‘ದೇಶದ ಜನ ಇವಿಎಂ ಕಾರ್ಯನಿರ್ವಹಣೆ ಬಗ್ಗೆ ಅನುಮಾನ ವ್ಯಕ್ತಪಡಿಸುತ್ತಿದ್ದು, ಇದಕ್ಕೆ ಆಯೋಗ ಸೂಕ್ತ ಕ್ರಮ ಕೈಗೊಳ್ಳುವ ಅವಶ್ಯಕತೆ ಇದೆ’ ಎಂದು ನಾಯಕರು ಹೇಳಿದ್ದಾರೆ.

ADVERTISEMENT

ಈ ಮೊದಲು, ಚುನಾವಣೆಯಲ್ಲಿ ಮತಪತ್ರಗಳನ್ನು ಬಳಸಬೇಕು ಎಂದು ವಿರೋಧಪಕ್ಷಗಳು ಒತ್ತಾಯಿಸಿದ್ದವು. ಮತ್ತೆ ಮತಪತ್ರ ಪದ್ಧತಿಗೆ ಹಿಂದಿರುಗುವ ಪ್ರಶ್ನೆಯೇ ಇಲ್ಲ ಎಂದು ಆಯೋಗ ಹೇಳಿದ ನಂತರ, ಇವಿಎಂ–ವಿವಿಪ್ಯಾಟ್‌ ಯಂತ್ರಗಳಲ್ಲಿನ ಫಲಿತಾಂಶವನ್ನು ಹೋಲಿಕೆ ಮಾಡುವಂತೆ ಅವು ಆಗ್ರಹಿಸಿವೆ.

ಕಾಂಗ್ರೆಸ್‌ನ ಗುಲಾಂ ನಬಿ ಆಜಾದ್‌, ಮಲ್ಲಿಕಾರ್ಜುನ ಖರ್ಗೆ, ಅಹ್ಮದ್‌ ಪಟೇಲ್‌ ಮತ್ತು ಇತರ ಪಕ್ಷಗಳ ನಾಯಕರು ನಿಯೋಗದಲ್ಲಿ ಇದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.