ADVERTISEMENT

ಕಾಂಗ್ರೆಸ್‌ ನಾಯಕ ಸಂಜಯ್‌ ನಿರುಪಮ್‌ ಕ್ಷಮೆಯಾಚಿಸಿದ ಮಾಜಿ ಸಿಎಜಿ ರಾಯ್

2ಜಿ ತರಂಗಾಂತರ ಹಂಚಿಕೆ ವರದಿಯಲ್ಲಿ ತಪ್ಪಾಗಿ ನಿರುಪಮ ಅವರ ಹೆಸರು ಉಲ್ಲೇಖ

​ಪ್ರಜಾವಾಣಿ ವಾರ್ತೆ
Published 28 ಅಕ್ಟೋಬರ್ 2021, 15:07 IST
Last Updated 28 ಅಕ್ಟೋಬರ್ 2021, 15:07 IST
ವಿನೋದ್ ರಾಯ್‌
ವಿನೋದ್ ರಾಯ್‌   

ನವದೆಹಲಿ (ಪಿಟಿಐ): ಮಾಜಿ ಸಿಎಜಿ ವಿನೋದ್‌ ರಾಯ್‌ ಅವರು ಕಾಂಗ್ರೆಸ್‌ ನಾಯಕ ಸಂಜಯ್‌ ನಿರುಪಮ್‌ ಅವರಿಗೆ ಬೇಷರತ್‌ ಕ್ಷಮೆಯಾಚಿಸಿದ್ದಾರೆ.

2ಜಿ ತರಂಗಾಂತರ ಹಂಚಿಕೆ ಕುರಿತ ಸಿಎಜಿ ವರದಿಯಲ್ಲಿ ಮಾಜಿ ಪ್ರಧಾನಿ ಮನಮೋಹನ ಸಿಂಗ್‌ ಅವರ ಹೆಸರು ಉಲ್ಲೇಖಿಸದಂತೆ ಸಂಸದರೊಬ್ಬರು ಒತ್ತಡ ಹೇರಿದ್ದರು ಎಂಬ ವಿವರಿಸುವಾಗ ಸಂಜಯ್ ನಿರುಪಮ್‌ ಅವರ ಹೆಸರನ್ನು ತಪ್ಪಾಗಿ ಉಲ್ಲೇಖಿಸಿದ್ದೆ ಎಂದು ವಿನೋದ್‌ ರಾಯ್‌ ಹೇಳಿದ್ದಾರೆ.

ಮಾಜಿ ಸಿಎಜಿ ವಿನೋದ್ ಅವರು 2014ರಲ್ಲಿ ನೀಡಿದ ವರದಿಯಲ್ಲಿ ನಿರುಪಮ್ ಅವರ ವಿರುದ್ಧ ಆರೋಪ ಮಾಡಿ ಅದನ್ನು ಸಂದರ್ಶನದಲ್ಲೂ ಪುನರಾವರ್ತಿಸಿದ್ದರು. ಅದಕ್ಕಾಗಿ ನಿರುಪಮ್ ಅವರು ವಿನೋದ್‌ ರಾಯ್ ವಿರುದ್ಧ ಮಾನನಷ್ಟ ಮೊಕದ್ದಮೆ ಹೂಡಿದ್ದರು.

ADVERTISEMENT

ಪಟಿಯಾಲಾ ಹೌಸ್‌ ಮೆಟ್ರೊಪಾಲಿಟನ್ ನ್ಯಾಯಾಲಯವು ವಿನೋದ್ ರಾಯ್‌ ಅವರ ಕ್ಷಮಾಪಣೆಯನ್ನು ಸ್ವೀಕರಿಸಿ ನಿರುಪಮ್‌ ಹೇಳಿಕೆಯನ್ನು ದಾಖಲಿಸಿಕೊಂಡ ನಂತರ ಪ್ರಕರಣವನ್ನು ವಿಲೇವಾರಿ ಮಾಡಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.