ADVERTISEMENT

ಕೋವಿಡ್‌: ಭವಿಷ್ಯದ ಅಲೆಗಳಿಂದ ಗಂಭೀರ ಪರಿಣಾಮ ಸಾಧ್ಯತೆ ಕಡಿಮೆ ಎಂದ ತಜ್ಞರು

ವ್ಯಾಪಕ ಲಸಿಕೆ ನೀಡಿಕೆ, ರೋಗನಿರೋಧಕ ಶಕ್ತಿ ವೃದ್ಧಿಯೇ ಕಾರಣ: ತಜ್ಞರು

ಪಿಟಿಐ
Published 20 ಮಾರ್ಚ್ 2022, 10:25 IST
Last Updated 20 ಮಾರ್ಚ್ 2022, 10:25 IST
ಕೊರೊನಾ ವೈರಸ್
ಕೊರೊನಾ ವೈರಸ್   

ನವದೆಹಲಿ: ದೇಶದಲ್ಲಿ ಕೋವಿಡ್‌ ಲಸಿಕೆ ನೀಡಿಕೆ ಪ್ರಮಾಣ ಹೆಚ್ಚು. ಸೋಂಕು ತಗುಲಿದ ನಂತರ ಹಲವರಲ್ಲಿ ಸ್ವಾಭಾವಿಕವಾಗಿಯೇ ರೋಗನಿರೋಧಕ ಶಕ್ತಿಯೂ ವೃದ್ದಿಸಿದೆ. ಹೀಗಾಗಿ, ಭವಿಷ್ಯದಲ್ಲಿ ಕಂಡುಬರುವ ಕೋವಿಡ್‌–19 ಅಲೆಗಳು ದೇಶದಲ್ಲಿ ಗಂಭೀರ ಪರಿಣಾಮ ಬೀರವು ಎಂದು ತಜ್ಞರು ಹೇಳಿದ್ದಾರೆ.

ದಕ್ಷಿಣ ಏಷ್ಯಾ ಹಾಗೂ ಯುರೋಪ್‌ ರಾಷ್ಟ್ರಗಳಲ್ಲಿ ಕೋವಿಡ್‌ ಪ್ರಕರಣಗಳು ಹೆಚ್ಚುತ್ತಿರುವ ಹಿನ್ನೆಲೆಯಲ್ಲಿ ತಜ್ಞರ ಈ ಹೇಳಿಕೆಗೆ ಮಹತ್ವ ಬಂದಿದೆ.

ಹಲವು ದಿನಗಳಿಂದ ದೈನಂದಿನ ಕೋವಿಡ್‌–19 ಪ್ರಕರಣಗಳು ಹಾಗೂ ಕೋವಿಡ್‌ನಿಂದಾಗಿ ಸಾವನ್ನಪ್ಪುವವರ ಸಂಖ್ಯೆಯಲ್ಲಿ ಇಳಿಕೆ ಕಂಡುಬರುತ್ತಿದೆ. ಹೀಗಾಗಿ ಮಾಸ್ಕ್‌ ಧರಿಸುವುದಕ್ಕೆ ಸಂಬಂಧಿಸಿದ ನಿರ್ಬಂಧಗಳ ಸಡಿಲಿಕೆ ಬಗ್ಗೆ ಸರ್ಕಾರ ಯೋಚಿಸಬೇಕು ಎಂದೂ ತಜ್ಞರು ಹೇಳಿದ್ದಾರೆ.

‘ಕೋವಿಡ್‌ಗೆ ಕಾರಣವಾಗುವ ಸಾರ್ಸ್‌–ಕೋವ್–2’ ಆರ್‌ಎನ್‌ಎ ವೈರಸ್‌ ಆಗಿರುವ ಕಾರಣ ಅದು ರೂಪಾಂತರಗೊಳ್ಳುತ್ತಲೇ ಇರುತ್ತದೆ. ಈಗಾಗಲೇ 1,000ಕ್ಕೂ ಹೆಚ್ಚು ಸಲ ರೂಪಾಂತರಗೊಂಡಿದೆ. ಈ ಪೈಕಿ 5 ರೂಪಾಂತರ ತಳಿಗಳು ಮಾತ್ರ ಕಳವಳಕಾರಿಯಾಗಿವೆ’ ಎಂದು ಅಖಿಲ ಭಾರತ ವೈದ್ಯಕೀಯ ವಿಜ್ಞಾನಗಳ ಸಂಸ್ಥೆಯಲ್ಲಿ ಹಿರಿಯ ಸಾಂಕ್ರಾಮಿಕ ರೋಗಗಳ ತಜ್ಞರಾಗಿರುವ ಡಾ.ಸಂಜಯ್ ರಾಯ್‌ ಹೇಳಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.