ಸಾಂದರ್ಭಿಕ ಚಿತ್ರ
ಗುವಾಹಟಿ: ಅಸ್ಸಾಂನ ಸೋನಿತ್‌ಪುರ ಜಿಲ್ಲೆಯ ಕಾಡೊಂದರಲ್ಲಿ ಹೂತಿಟ್ಟಿದ್ದ ಸ್ಫೋಟಕಗಳನ್ನು ಅಧಿಕಾರಿಗಳು ಶನಿವಾರ ವಶಪಡಿಸಿಕೊಂಡಿದ್ದಾರೆ.
ಈ ಕಾರಣದಿಂದಾಗಿ, 76ನೇ ಗಣರಾಜ್ಯೋತ್ಸವ ಆಚರಣೆಗೆ ರಾಜ್ಯದಾದ್ಯಂತ ಬಿಗಿ ಭದ್ರತಾ ಕ್ರಮಗಳನ್ನು ಕೈಗೊಳ್ಳಲಾಗಿದೆ ಎಂದು ಪೊಲೀಸರು ತಿಳಿಸಿದ್ದಾರೆ.
‘ಅಕ್ರಮ ಶಸ್ತ್ರಾಸ್ತ್ರಗಳು ಮತ್ತು ಮದ್ದುಗುಂಡುಗಳನ್ನು ರಹಸ್ಯವಾಗಿ ಕಾಡಿನಲ್ಲಿ ಹೂತಿಟ್ಟಿರುವ ಕುರಿತು ಮಾಹಿತಿ ಆಧರಿಸಿ, ಶನಿವಾರ ಕಾರ್ಯಾಚರಣೆ ನಡೆಸಲಾಯಿತು. ಈ ವೇಳೆ ಐದು ಗ್ರೆನೇಡ್‌ಗಳು ಮತ್ತು ಮೂರು ಡಿಟೊನೇಟರ್‌ಗಳನ್ನು ಒಳಗೊಂಡ ಸ್ಫೋಟಕಗಳನ್ನು ಪಾಲಿಥೀನ್ ಬ್ಯಾಗ್‌ನಲ್ಲಿ ಸುತ್ತಿ, ಮಣ್ಣಿನಲ್ಲಿ ಹೂತಿಡಲಾಗಿತ್ತು’ ಎಂದು ಸೋನಿತ್‌ಪುರ ಪೊಲೀಸರು ತಿಳಿಸಿದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.