ADVERTISEMENT

ಲಖನೌ: ಪೋಷಕರು ಮತದಾನ ಮಾಡಿದರೆ ವಿದ್ಯಾರ್ಥಿಗಳಿಗೆ ಪರೀಕ್ಷೆಯಲ್ಲಿ 10 ಅಂಕ!

​ಪ್ರಜಾವಾಣಿ ವಾರ್ತೆ
Published 8 ಏಪ್ರಿಲ್ 2019, 7:09 IST
Last Updated 8 ಏಪ್ರಿಲ್ 2019, 7:09 IST
   

ಲಖನೌ: ಇಲ್ಲಿನ ಕ್ರಿಸ್ತ್ ಚರ್ಚ್ ಕಾಲೇಜ್‍ನಲ್ಲಿ ಕಲಿಯುವ ವಿದ್ಯಾರ್ಥಿಗಳ ಪೋಷಕರು ಲೋಕಸಭಾ ಚುನಾವಣೆಯಲ್ಲಿ ಮತದಾನ ಮಾಡಿದರೆ, ವಿದ್ಯಾರ್ಥಿಗಳಿಗೆ ಅಂತಿಮ ಪರೀಕ್ಷೆಯಲ್ಲಿ ಹೆಚ್ಚುವರಿ 10 ಅಂಕಗಳನ್ನು ನೀಡುವುದಾಗಿ ಶಾಲಾ ಆಡಳಿತ ಮಂಡಳಿ ಹೇಳಿದೆ.

'ಇಲ್ಲಿ ಕಲಿಯುತ್ತಿರುವ ವಿದ್ಯಾರ್ಥಿಗಳ ಪೋಷಕರು ಚುನಾವಣೆಯಲ್ಲಿ ಮತ ಚಲಾಯಿಸಿದರೆ ವಿದ್ಯಾರ್ಥಿಗಳಿಗೆ ಹೆಚ್ಚುವರಿ 10 ಅಂಕ ನೀಡಲಾಗುವುದು' ಎಂದು ಶಾಲೆಯ ಪ್ರಾಂಶುಪಾಲ ಆರ್.ಕೆ. ಚಟರ್ಜಿ ಹೇಳಿರುವುದಾಗಿ ಇಂಡಿಯಾ ಟುಡೇ ವರದಿ ಮಾಡಿದೆ.

ಇಷ್ಟೇ ಅಲ್ಲದೆ ಶಾಲೆಯ ಗೇಟ್ ಮುಂದೆ ಮತದಾನ ಜಾಗೃತಿಯ ಬ್ಯಾನರ್ ಹಾಕಲಾಗಿದೆ. ಮತದಾನ ಎಂಬುದು ನಮ್ಮ ದೇಶದ ಕಡೆಗಿರುವ ಬದ್ಧತೆಯಾಗಿದೆ.ವಿದ್ಯಾರ್ಥಿಗಳ ಪೋಷಕರುತಮ್ಮ ಮತ ಚಲಾಯಿಸಬೇಕೆಂದು ನಾವು ಮನವಿ ಮಾಡುತ್ತೇವೆ.ಪೋಷಕರು ಮತದಾನ ಮಾಡಿದರೆ ವಿದ್ಯಾರ್ಥಿಗಳಿಗೆ ಅಂತಿಮ ಪರೀಕ್ಷೆಯಲ್ಲಿ ಹೆಚ್ಚುವರಿ 10 ಅಂಕ ನೀಡಲಾಗುವುದು ಎಂದು ಬ್ಯಾನರ್‌ನಲ್ಲಿ ಬರೆದಿದೆ.

ADVERTISEMENT

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.