ADVERTISEMENT

ಹಫೀಜ್‌ ಪಕ್ಷದ ಫೇಸ್‌ಬುಕ್‌ ಖಾತೆಗಳು ನಿಷ್ಕ್ರಿಯ

ಪಿಟಿಐ
Published 15 ಜುಲೈ 2018, 16:34 IST
Last Updated 15 ಜುಲೈ 2018, 16:34 IST
ಹಫೀಜ್ ಸಯೀದ್‌
ಹಫೀಜ್ ಸಯೀದ್‌   

ಲಾಹೋರ್‌:ಮುಂಬೈ ದಾಳಿಯ ಸಂಚುಕೋರ ಹಫೀಜ್‌ ಸಯೀದ್‌ ನೇತೃತ್ವದ ಜಮಾತ್‌ ಉದ್‌ ದವಾ (ಜೆಯುಡಿ) ಸಂಘಟನೆಯ ರಾಜಕೀಯ ಪಕ್ಷ ಮಿಲ್ಲಿ ಮುಸ್ಲಿಂ ಲೀಗ್‌ನ (ಎಂಎಂಎಲ್‌) ಹಲವು ಪೇಸ್‌ಬುಕ್‌ ಖಾತೆ ಮತ್ತು ಪುಟಗಳನ್ನು ನಿಷ್ಕ್ರಿಯಗೊಳಿಸಲಾಗಿದೆ.

ಪಾಕಿಸ್ತಾನದಲ್ಲಿ ಜುಲೈ 25ರಂದು ಸಾರ್ವತ್ರಿಕ ಚುನಾವಣೆ ನಡೆಯುತ್ತಿರುವ ಕಾರಣ ಈ ಖಾತೆಗಳನ್ನು ನಿಷ್ಕ್ರಿಯಗೊಳಿಸಲಾಗಿದೆ ಎಂದು ಮಾಧ್ಯಮಗಳು ವರದಿ ಮಾಡಿವೆ.

‘ಸಾಮಾಜಿಕ ಜಾಲತಾಣ ಫೇಸ್‌ಬುಕ್‌, ಸಕಾರಾತ್ಮಕ ವಿಷಯಗಳಿಗೆ ಆದ್ಯತೆ ನೀಡುತ್ತದೆ. ಪಾಕಿಸ್ತಾನ, ಭಾರತ, ಬ್ರೆಜಿಲ್‌ ಮತ್ತು ಮೆಕ್ಸಿಕೊದಲ್ಲಿ ಮುಂಬರುವ ಚುನಾವಣೆ ವೇಳೆ ಫೇಸ್‌ಬುಕ್‌ ಹಸ್ತಕ್ಷೇಪ ತಡೆಯಲು ಮುಂಜಾಗ್ರತಾ ಕ್ರಮ ವಹಿಸಲಾಗುವುದು’ ಎಂದು ಫೇಸ್‌ಬುಕ್‌ ಮುಖ್ಯ ಕಾರ್ಯನಿರ್ವಹಣಾಧಿಕಾರಿ ಮಾರ್ಕ್‌ ಜುಕರ್‌ಬರ್ಗ್‌ ಹೇಳಿದ್ದಾರೆ.

ADVERTISEMENT

ನಕಲಿ ಫೇಸ್‌ಬುಕ್‌ ಖಾತೆ ಹಾಗೂ ಪುಟಗಳನ್ನು ಗುರುತಿಸಲು ಫೇಸ್‌ಬುಕ್‌ನ ಅಧಿಕಾರಿಗಳು ಈಚೆಗೆ ಪಾಕಿಸ್ತಾನದ ಚುನಾವಣಾ ಆಯೋಗದ ಸಹಾಯ ಕೋರಿದ್ದರು.

‘ನಮ್ಮ ಪಕ್ಷದ ಅಭ್ಯರ್ಥಿಗಳ ಹಲವು ಫೇಸ್‌ಬುಕ್‌ ಖಾತೆಗಳನ್ನು ಯಾವುದೇ ಕಾರಣ ನೀಡದೆ ನಿಷ್ಕ್ರಿಯಗೊಳಿಸಲಾಗಿದೆ. ಫೇಸ್‌ಬುಕ್‌ ಅಭಿವ್ಯಕ್ತಿ ಸ್ವಾತಂತ್ರ್ಯವನ್ನು ನಿಷೇಧಿಸಿದೆ’ ಎಂದು ಎಂಎಂಎಲ್‌ ವಕ್ತಾರರು ಹೇಳಿದ್ದಾರೆ.

ಪಾಕಿಸ್ತಾನದ ಚುನಾವಣಾ ಆಯೋಗವು ಈಚೆಗೆ ಎಂಎಂಎಲ್‌ಗೆ ಮಾನ್ಯತೆ ನಿರಾಕರಿಸಿತ್ತು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.