ADVERTISEMENT

ಫೇಸ್‌ಬುಕ್: ಕನ್ನಡದಲ್ಲಿ ಡಿಜಿಟಲ್ ಸಾಕ್ಷರತೆ

ಪಿಟಿಐ
Published 29 ಅಕ್ಟೋಬರ್ 2018, 18:36 IST
Last Updated 29 ಅಕ್ಟೋಬರ್ 2018, 18:36 IST
   

ನವದೆಹಲಿ: ಕನ್ನಡ ಸೇರಿದಂತೆ ಭಾರತದ ಆರು ಭಾಷೆಗಳಲ್ಲಿ ಡಿಜಿಟಲ್ ಸಾಕ್ಷರತಾ ಕಾರ್ಯಕ್ರಮಕ್ಕೆ ಫೇಸ್‌ಬುಕ್ ಚಾಲನೆ ನೀಡಿದೆ.

ತನ್ನ ಬಳಕೆದಾರರಿಗೆ ಸುರಕ್ಷತಾ ಸಲಹೆಗಳನ್ನು ಫೇಸ್‌ಬುಕ್ ನೀಡಲಿದೆ. ಈ ವರ್ಷಾಂತ್ಯಕ್ಕೆ ದೇಶದ ಸುಮಾರು 3 ಲಕ್ಷ ಜನರಿಗೆ ಡಿಜಿಟಲ್ ಸಾಕ್ಷರತೆ ತರಬೇತಿ ನೀಡುವ ಗುರಿಯನ್ನು ಸಂಸ್ಥೆ ಹಾಕಿಕೊಂಡಿದೆ.

ಬೆಂಗಾಳಿ, ಹಿಂದಿ, ತಮಿಳು, ತೆಲುಗು ಮತ್ತು ಮಲಯಾಳ ಭಾಷೆಗಳಲ್ಲೂ ಈ ಕಾರ್ಯಕ್ರಮ ಲಭ್ಯವಾಗುತ್ತಿದೆ. ದೆಹಲಿ ಐಐಟಿಯಲ್ಲಿ ಮಕ್ಕಳಿಗಾಗಿ ಎರಡು ದಿನಗಳ ‘ಚೈಲ್ಡ್ ಸೇಫ್ಟಿ ಹ್ಯಾಕಥಾನ್’ ಅನ್ನೂ ಸಂಸ್ಥೆ ಆಯೋಜಿಸುತ್ತಿದೆ.

ADVERTISEMENT

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.