ADVERTISEMENT

ಲೇಖಕ ಡಾ.ವಿಪಿನ್‌ ಅಗ್ನಿಹೋತ್ರಿ ಫೇಸ್‌ಬುಕ್‌ ಹ್ಯಾಕ್‌

​ಪ್ರಜಾವಾಣಿ ವಾರ್ತೆ
Published 10 ಜೂನ್ 2020, 13:16 IST
Last Updated 10 ಜೂನ್ 2020, 13:16 IST
ಫೇಸ್‌ಬುಕ್‌
ಫೇಸ್‌ಬುಕ್‌    

ಲಖನೌ: ಖ್ಯಾತ ಲೇಖಕ, ಚಿತ್ರ ನಿರ್ದೇಶಕ ಡಾ.ವಿಪಿನ್ ಅಗ್ನಿಹೋತ್ರಿ ಫೇಸ್‌ಬುಕ್‌ ಖಾತೆಯನ್ನು ಕಿಡಿಗೇಡಿಗಳು ಹ್ಯಾಕ್‌ ಮಾಡಿದ್ದು, ನಕಲಿ ಮರಣ ಪ್ರಮಾಣಪತ್ರ ಸಲ್ಲಿಸಿ ಖಾತೆ ನಿಷ್ಕ್ರಿಯಗೊಳಿಸಿದ್ದಾರೆ.

ವಿಪಿನ್‌ ಅವರು ತಮ್ಮ ಫೇಸ್‌ಬುಕ್‌ಗೆ ಲಾಗ್‌ಇನ್‌ ಆಗಲು ಪ್ರಯತ್ನಿಸಿದಾಗ‘ನೀವು ಮೃತಪಟ್ಟಿರುವ ಕಾರಣದಿಂದ ನಿಮ್ಮ ಫೇಸ್‌ಬುಕ್‌ ಖಾತೆಯನ್ನು ತೆರೆಯಲು ಸಾಧ್ಯವಿಲ್ಲ’ ಎನ್ನುವ ಸಂದೇಶ ಓದಿ ಒಂದು ಕ್ಷಣ ಆಘಾತಕ್ಕೊಳಗಾಗಿದ್ದರು. ‘ನನ್ನ ಫೇಸ್‌ಬುಕ್ ಖಾತೆಯನ್ನು ಯಾರೋ ಹ್ಯಾಕ್‌ ಮಾಡಿದ್ದಾರೆ ಹಾಗೂ ಫೇಸ್‌ಬುಕ್‌ಗೆ ನಕಲಿ ಮರಣ ಪ್ರಮಾಣಪತ್ರ ಸಲ್ಲಿಸಿದ್ದಾರೆ’ ಎಂದು ವಿಪಿನ್‌ ಹೇಳಿದರು.

‘ಉತ್ತರ ಪ್ರದೇಶದ ಸೈಬರ್‌ ಸೆಲ್‌ಗೆ ಈ ಕುರಿತು ದೂರು ನೀಡಿದ್ದು, ಪೊಲೀಸರು ತನಿಖೆ ನಡೆಸುತ್ತಿದ್ದಾರೆ. ನನ್ನ ವೃತ್ತಿ ಜೀವನಕ್ಕೆ ಇದರಿಂದ ಯಾವುದೇ ಪರಿಣಾಮ ಆಗುವುದಿಲ್ಲ. ಆದರೆ ಖಾತೆಯನ್ನು ಹ್ಯಾಕ್‌ ಮಾಡಿದವರು, ಈ ರೀತಿ ನಕಲಿ ಮರಣ ಪ್ರಮಾಣ ಪತ್ರವನ್ನೂ ಸೃಷ್ಟಿಸುತ್ತಾರೆ ಎಂದು ಊಹಿಸಿ ಆತಂಕವಾಗಿದೆ’ ಎಂದರು. ರಾಜ್ಯದಲ್ಲಿ ಇಂಥ ಪ್ರಕರಣ ಇದೇ ಮೊದಲ ಬಾರಿ ಎಂದು ಪೊಲೀಸರು ಮಾಹಿತಿ ನೀಡಿದ್ದಾರೆ.

ADVERTISEMENT

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.