ADVERTISEMENT

22 ವರ್ಷದ ಸೋದರಳಿಯನಿಗೆ ಲಸಿಕೆ: ಫಡಣವೀಸ್‌ ವಿರುದ್ಧ ಟೀಕಾ ಪ್ರಹಾರ

​ಪ್ರಜಾವಾಣಿ ವಾರ್ತೆ
Published 20 ಏಪ್ರಿಲ್ 2021, 10:15 IST
Last Updated 20 ಏಪ್ರಿಲ್ 2021, 10:15 IST
ದೇವೇಂದ್ರ ಫಡಣವೀಸ್
ದೇವೇಂದ್ರ ಫಡಣವೀಸ್   

ಮುಂಬೈ: ಮಹಾರಾಷ್ಟ್ರದ ವಿರೋಧಪಕ್ಷದ ನಾಯಕ ದೇವೇಂದ್ರ ಫಡಣವೀಸ್‌ ಅವರ ಸೋದರಳಿಯ, 22 ವರ್ಷದ ತನ್ಮಯ್‌ ಕೋವಿಡ್‌ ಲಸಿಕೆಯನ್ನು ಪಡೆದಿದ್ದು, ಇದಕ್ಕಾಗಿ ಫಡಣವೀಸ್‌ ತೀವ್ರ ಟೀಕೆಗೆ ಗುರಿಯಾಗಿದ್ದಾರೆ.

ನಾಗಪುರದ ರಾಷ್ಟ್ರೀಯ ಕ್ಯಾನ್ಸರ್‌ ಸಂಸ್ಥೆಯಲ್ಲಿ ಅವರು ಲಸಿಕೆ ಪಡೆದಿದ್ದು ಚಿತ್ರ ವೈರಲ್‌ ಆಗಿತ್ತು. ಸದ್ಯ ಆ ಚಿತ್ರವನ್ನು ಡಿಲೀಟ್ ಮಾಡಲಾಗಿದೆ. ಮಾರ್ಗಸೂಚಿ ನಿಯಮ ಉಲ್ಲಂಘನೆಗಾಗಿ ಮಹಾವಿಕಾಸ ಆಘಾಡಿ ನೇತೃತ್ವದ ಸರ್ಕಾರದ ಮೈತ್ರಿ ಪಕ್ಷಗಳು ಈಗ ಬಿಜೆಪಿ ಮತ್ತು ಫಡಣವೀಸ್‌ ವಿರುದ್ಧ ಟೀಕಾಪ್ರಹಾರ ನಡೆಸಿವೆ.

ಶಾಸಕಿ, 1995–99ರಲ್ಲಿ ಶಿವಸೇನೆ–ಬಿಜೆಪಿ ಮೈತ್ರಿ ಸರ್ಕಾರದಲ್ಲಿ ಸಚಿವೆಯಾಗಿದ್ದ ಶೋಭಾ ಫಡಣವೀಸ್‌ ಅವರ ಮೊಮ್ಮಗ ತನ್ಮಯ್‌. ಶೋಭಾ ಅವರು ದೇವೇಂದ್ರ ಫಡಣವೀಸ್‌ ಅವರ ಚಿಕ್ಕಮ್ಮ.

ADVERTISEMENT

ಕೋವಿಡ್‌ ಮಾರ್ಗಸೂಚಿಗಳ ಪ್ರಕಾರ, ಸದ್ಯ 45 ವರ್ಷದ ಮೀರಿದವರಷ್ಟೇ ಲಸಿಕೆ ಪಡೆಯಲು ಅರ್ಹರು. ಮೇ 1ರಿಂದ ಜಾರಿಗೆ ಬರುವಂತೆ 18 ವರ್ಷ ಮೀರಿದವರೂ ಲಸಿಕೆ ಪಡೆಯಬಹುದು ಎಂದು ಕೇಂದ್ರ ಪ್ರಕಟಿಸಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.