ADVERTISEMENT

ಮಹಾರಾಷ್ಟ್ರ | ನಕಲಿ ಕಾಲ್‌ ಸೆಂಟರ್‌: ಐವರ ಬಂಧನ

ನಾಸಿಕ್‌ ಜಿಲ್ಲೆಯ ಇಗತಪುರಿಯಲ್ಲಿ ಕಾರ್ಯಾಚರಣೆ

ಪಿಟಿಐ
Published 10 ಆಗಸ್ಟ್ 2025, 15:10 IST
Last Updated 10 ಆಗಸ್ಟ್ 2025, 15:10 IST
   

ಮುಂಬೈ: ಅಮೆರಿಕ, ಕೆನಡಾ ಸೇರಿದಂತೆ ವಿವಿಧ ದೇಶಗಳ ನಾಗರಿಕರಿಗೆ ಕರೆ ಮಾಡಿ ವಂಚಿಸುತ್ತಿದ್ದ ನಕಲಿ ಕಾಲ್‌ ಸೆಂಟರ್‌ ಮೇಲೆ ದಾಳಿ ನಡೆಸಿದ ಸಿಬಿಐ ಅಧಿಕಾರಿಗಳು ಐವರು ಆರೋಪಿಗಳನ್ನು ಬಂಧಿಸಿದ್ದಾರೆ.

ಮಹಾರಾಷ್ಟ್ರದ ನಾಸಿಕ್‌ ಜಿಲ್ಲೆಯ ಪ್ರಸಿದ್ಧ ಗಿರಿಧಾಮವಾದ ಇಗತಪುರಿಯ ‘ರೈನ್‌ಫಾರೆಸ್ಟ್‌ ರೆಸಾರ್ಟ್‌’ನಲ್ಲಿ ‘ಅಮೆಜಾನ್‌ ಸಪೋರ್ಟ್‌ ಸರ್ವೀಸ್‌ ಕಾಲ್‌ ಸೆಂಟರ್‌’ ಹೆಸರಿನಲ್ಲಿ ಈ ತಂಡ ಕಾರ್ಯಾಚರಿಸುತ್ತಿತ್ತು. 62 ನೌಕರರು ಕೆಲಸ ಮಾಡುತ್ತಿದ್ದರು.

44 ಲ್ಯಾಪ್‌ಟಾಪ್‌, 71 ಮೊಬೈಲ್‌ ಫೋನ್‌ಗಳು ₹1.20 ಕೋಟಿ ನಗದು, 500 ಗ್ರಾಂ ಚಿನ್ನ, ₹1 ಕೋಟಿ ಮೌಲ್ಯದ ಏಳು ಕಾರುಗಳನ್ನು ವಶಪಡಿಸಿಕೊಳ್ಳಲಾಗಿದೆ. ₹5 ಲಕ್ಷ ಮೊತ್ತದ ಕ್ರಿಪ್ಟೊಕರೆನ್ಸಿ, ₹1.26 ಲಕ್ಷ ಮೊತ್ತದ (2 ಸಾವಿರ ಕೆನಡಿಯನ್‌ ಡಾಲರ್‌) ಗಿಫ್ಟ್‌ ವೋಚರ್‌ಗಳ ವಹಿವಾಟು ಪತ್ತೆಯಾಗಿದೆ. ಈ ವಂಚಕರ ಜಾಲವು ಅಂತರರಾಷ್ಟ್ರೀಯ ಮಟ್ಟದಲ್ಲಿ ಹರಡಿರುವುದರಿಂದ ಸಮಗ್ರ ತನಿಖೆ ನಡೆಸಲಾಗುತ್ತಿದೆ ಎಂದು ಅಧಿಕಾರಿಗಳು ಭಾನುವಾರ ತಿಳಿಸಿದ್ದಾರೆ.

ADVERTISEMENT

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.