ಡೆಹ್ರಾಡೂನ್: ಜನರನ್ನು ವಂಚಿಸುವ ಮತ್ತು ಮತಾಂತರಿಸುವ ನಕಲಿ ಬಾಬಾಗಳ ವಿರುದ್ಧ ಉತ್ತರಾಖಂಡ ಸರ್ಕಾರ ನಡೆಸುತ್ತಿರುವ ‘ಆಪರೇಷನ್ ಕಾಲನೆಮಿ’ ಅಡಿಯಲ್ಲಿ ಈವರೆಗೆ 14 ಜನರನ್ನು ಬಂಧಿಸಲಾಗಿದೆ ಎಂದು ಅಧಿಕಾರಿಗಳು ಹೇಳಿದ್ದಾರೆ.
ಆಪರೇಷನ್ ಕಾಲನೆಮಿ ಅಡಿಯಲ್ಲಿ ರಾಜ್ಯದ 5,500ಕ್ಕೂ ಹೆಚ್ಚು ಜನರನ್ನು ಪೊಲೀಸರು ವಿಚಾರಣೆ ಮಾಡಿದ್ದು, ಅದರಲ್ಲಿ 1,182 ಜನರ ವಿರುದ್ಧ ಎಚ್ಚರಿಕೆ ಕ್ರಮ ಕೈಗೊಳ್ಳಲಾಗಿದೆ ಎಂದು ಐಜಿಪಿ (ಅಪರಾಧ ಮತ್ತು ಕಾನೂನು ಸುವ್ಯವಸ್ಥೆ) ನಿಲೇಶ್ ಆನಂದ್ ಭರಣೆ ಹೇಳಿದ್ದಾರೆ. 14 ಜನರನ್ನು ಬಂಧಿಸಲಾಗಿದ್ದು, ಅವರಲ್ಲಿ ಕೆಲವರು ಬಾಂಗ್ಲಾದೇಶದ ಪ್ರಜೆಗಳು ಎಂದು ಅಧಿಕಾರಿ ಹೇಳಿದ್ದಾರೆ.
ಉತ್ತರಾಖಂಡ ಪೊಲೀಸರು ಜುಲೈ ವೇಳೆಗೆ ಕಾರ್ಯಾಚರಣೆ ಪ್ರಾರಂಭಿಸಿದ್ದರು. ಆಗಸ್ಟ್ ವೇಳೆಗೆ 4,000 ಜನರ ವಿಚಾರಣೆ ನಡೆಸಿ 300 ಜನರನ್ನು ಬಂಧಿಸಲಾಗಿದೆ ಎಂದು ಪೊಲೀಸರು ತಿಳಿಸಿದ್ದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.