ADVERTISEMENT

ಪಾಕ್‌ನಿಂದ ಸಾಮಾಜಿಕ ಮಾಧ್ಯಮದಲ್ಲಿ ಸುಳ್ಳು ಮಾಹಿತಿ: ರಿ‍ಪೋರ್ಟ್ ಮಾಡಲು PIB ಮನವಿ

ಪ್ರಜಾವಾಣಿ ವೆಬ್‌ ಡೆಸ್ಕ್‌ 
Published 9 ಮೇ 2025, 3:09 IST
Last Updated 9 ಮೇ 2025, 3:09 IST
   

ಬೆಂಗಳೂರು: ಪಾಕಿಸ್ತಾನದ ಸಾಮಾಜಿಕ ಮಾಧ್ಯಮಗಳು ಸಂಘಟಿತ ತಪ್ಪು ಮಾಹಿತಿ ಹರಡುವಿಕೆಯನ್ನು ಆರಂಭಿಸಿದೆ ಎಂದು ಪಿಐಬಿ ದೇಶದ ಜನರನ್ನು ಎಚ್ಚರಿಸಿದೆ.

ಭಾರತದಲ್ಲಿ ಅಪನಂಬಿಕೆ, ಆತಂಕ ಮತ್ತು ಗೊಂದಲ ಸೃಷ್ಟಿಸುವುದು ಅವರ ಉದ್ದೇಶವಾಗಿದೆ. ಉದ್ದೇಶಪೂರ್ವಕವಾಗಿ ಹರಡುತ್ತಿರುವ ತಪ್ಪು ಮಾಹಿತಿಯ ಬಲೆಯಲ್ಲಿ ಬೀಳಬೇಡಿ. ಮುಂದಿನ ದಿನಗಳಲ್ಲಿ ಸಾಮಾಜಿಕ ಮಾಧ್ಯಮ ವೇದಿಕೆಗಳು ಇಂತಹ ಸುಳ್ಳು ಮಾಹಿತಿಗಳಿಂದ ತುಂಬಿಹೋಗುವ ಸಾಧ್ಯತೆ ಇದೆ. ಹೀಗಾಗಿ, ಯಾವುದೇ ಮಾಹಿತಿಯನ್ನು ಜಾಗರೂಕವಾಗಿ ಪರಿಶೀಲನೆ ನಡೆಸುವುದು ಅತ್ಯಂತ ಪ್ರಮುಖವಾಗಿದೆ ಎಂದು ಅದು ಹೇಳಿದೆ.

ಯಾವುದೇ ತಪ್ಪು ಮಾಹಿತಿ ಕಂಡುಬಂದರೆ, ಅದರಲ್ಲೂ ಸಶಸ್ತ್ರ ಪಡೆ ಕುರಿತಾದ ಅಥವಾ ಸದ್ಯದ ಭಾರತ ಮತ್ತು ಪಾಕಿಸ್ತಾನ ನಡುವಿನ ಉದ್ವಿಗ್ನತೆ ಕುರಿತಂತೆ ಸುಳ್ಳು ಮಾಹಿತಿ ಗಮನಕ್ಕೆ ಬಂದರೆ #PIBFactCheckಗೆ ರಿಪೋರ್ಟ್ ಮಾಡಿ. ಈ ಕೆಳಗಿನ ವಾಟ್ಸ್‌ಆ್ಯಪ್ ಸಂಖ್ಯೆ, ಇಮೇಲ್ ಮೂಲಕ ಮಾಹಿತಿ ಹಂಚಿಕೊಳ್ಳಲು ಕೋರಲಾಗಿದೆ.

ADVERTISEMENT

WhatsApp: +91 8799711259

Email: factcheck@pib.gov.in

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.