ADVERTISEMENT

ಕೋವಿಡ್‌ನಿಂದ ಸಾವು:ತ್ವರಿತವಾಗಿ ಪಿಂಚಣಿ ಕ್ಲೇಮು ಇತ್ಯರ್ಥಕ್ಕೆ ಸೂಚನೆ

​ಪ್ರಜಾವಾಣಿ ವಾರ್ತೆ
Published 8 ಜೂನ್ 2021, 16:12 IST
Last Updated 8 ಜೂನ್ 2021, 16:12 IST
ಪ್ರಾತಿನಿಧಿಕ ಚಿತ್ರ
ಪ್ರಾತಿನಿಧಿಕ ಚಿತ್ರ   

ನವದೆಹಲಿ: ಕೋವಿಡ್‌ನಿಂದ ಮೃತಪಟ್ಟ ಕೇಂದ್ರ ಸರ್ಕಾರಿ ನೌಕರರ ಕುಟುಂಬದವರಿಗೆ ಯಾವುದೇ ರೀತಿ ವಿಳಂಬವಾಗದಂತೆ ಪಿಂಚಣಿ ತಲುಪಲಿದೆ. ಪಿಂಚಣಿಗೆ ಕುಟುಂಬದಿಂದ ಕ್ಲೇಮು ಬಂದಂತೆಯೇ ತುರ್ತಾಗಿ ಕ್ರಮವಹಿಸಬೇಕು ಎಂದು ಕೇಂದ್ರ ಸರ್ಕಾರ ಮಂಗಳವಾರ ಸೂಚನೆ ನೀಡಿದೆ.

ಕೇಂದ್ರ ಪಿಂಚಣಿ ಮತ್ತು ಪಿಂಚಣಿದಾರರ ಕಲ್ಯಾಣ ಇಲಾಖೆಯು ಈ ಸಂಬಂಧ ಎಲ್ಲ ಸಚಿವಾಲಯಗಳು, ಇಲಾಖೆಗಳು ಹಾಗೂ ಮಹಾಲೇಖಪಾಲರು ಹಾಗೂ ಪಿಂಚಣಿ ವಿತರಣೆ ಮಾಡುವ ಬ್ಯಾಂಕ್‌ಗಳ ವ್ಯವಸ್ಥಾಪಕ ನಿರ್ದೇಶಕರಿಗೆ ಅಗತ್ಯ ಸೂಚನೆಯನ್ನು ನೀಡಿದೆ.

ಕುಟುಂಬದ ಅರ್ಹ ಸದಸ್ಯರಿಂದ ಕ್ಲೇಮು ಬಂದ ಒಂದು ತಿಂಗಳಲ್ಲಿ ಪಿಂಚಣಿ ಸೌಲಭ್ಯವು ಆರಂಭವಾಗಬೇಕು ಎಂದು ಸಿಬ್ಬಂದಿ ಸಚಿವಾಲಯದ ರಾಜ್ಯ ಸಚಿವ ಜಿತೇಂದ್ರ ಸಿಂಗ್‌ ಅವರು ತಿಳಿಸಿದ್ದಾರೆ.

ADVERTISEMENT

ಕಚೇರಿ ಸೂಚನೆಯ ಅನುಸಾರ, ಎಲ್ಲ ಇಲಾಖೆಗಳ ಕಾರ್ಯದರ್ಶಿಗಳಿಗೆ ಈ ಕುರಿತ ಅರ್ಜಿಗಳನ್ನು ವೈಯಕ್ತಿಕವಾಗಿ ಗಮನಿಸಬೇಕು ಎಂದು ಸಲಹೆ ಮಾಡಿದ್ದಾರೆ. ಇದಕ್ಕಾಗಿ ಒಬ್ಬ ಅಧಿಕಾರಿಯನ್ನು ನಿಯೋಜಿಸಿ ಆ ಕುರಿತ ವಿವರಗಳನ್ನು ಇಲಾಖೆಯ ವೆಬ್‌ಸೈಟ್‌ನಲ್ಲಿಯೂ ಪ್ರಕಟಿಸಬೇಕು ಎಂದು ತಿಳಿಸಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.