@SowmenMitter
ಕೋಲ್ಕತ್ತ: ಪ್ರಸಿದ್ಧ ಬಂಗಾಳಿ ಗಾಯಕ ಮತ್ತು ಗೀತರಚನೆಕಾರ ಪ್ರತುಲ್ ಮುಖೋಪಾಧ್ಯಾಯ ಅವರು ಇಂದು (ಶನಿವಾರ) ನಿಧನರಾದರು. ಅವರಿಗೆ 82 ವರ್ಷ ವಯಸ್ಸಾಗಿತ್ತು.
ದೀರ್ಘಕಾಲದ ಅನಾರೋಗ್ಯದಿಂದ ಬಳಲುದಿತ್ತಿದ್ದ ಅವರನ್ನು, ಇತ್ತೀಚೆಗೆ ಎಸ್‌ಎಸ್‌ಕೆಎಂ ಆಸ್ಪತ್ರೆಗೆ ದಾಖಲಿಸಲಾಗಿತ್ತು. ಅವರ ಆರೋಗ್ಯದ ಪರಿಸ್ಥಿತಿ ಬಿಗಡಾಯಿಸಿತ್ತು. ಚಿಕಿತ್ಸೆಗೆ ಸ್ಪಂದಿಸದೆ ಕೊನೆಯುಸಿರೆಳೆದರು ಎಂದು ಪಶ್ಚಿಮ ಬಂಗಾಳ ಆರೋಗ್ಯ ಇಲಾಖೆಯ ಹಿರಿಯ ಅಧಿಕಾರಿಯೊಬ್ಬರು ತಿಳಿಸಿದ್ದಾರೆ.
ಮುಖೋಪಾಧ್ಯಾಯ ಅವರು ಸಾಮಾಜಿಕ ಸಮಸ್ಯೆಗಳಿಗೆ ಧ್ವನಿಗೂಡಿಸುವ ಹಾಡುಗಳಿಗಾಗಿ ಹೆಸರುವಾಸಿಯಾಗಿದ್ದರು.
ಅವರ ಪ್ರಸಿದ್ಧ ಗೀತರಚನೆ ಮತ್ತು ಗಾಯನ 'ಅಮಿ ಬಂಗ್ಲಾಯ್ ಗನ್ ಗೈ' ಮತ್ತು 'ಡಿಂಗಾ ಭಾಷಾವೋ ಸಾಗೋರ್' ಆಗಿದೆ.
ಪ್ರತುಲ್ ಮುಖೋಪಾಧ್ಯಾಯ ನಿಧನಕ್ಕೆ ಪಶ್ಚಿಮ ಬಂಗಾಳದ ಮುಖ್ಯಮಂತ್ರಿ ಮಮತಾ ಬ್ಯಾನರ್ಜಿ ಅವರು ಸಂತಾಪ ಸೂಚಿಸಿದ್ದಾರೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.