ADVERTISEMENT

ಮೋದಿ ಸರ್ಕಾರದ ನೀತಿಗಳ ವಿರುದ್ಧ ಹೋರಾಟ: ರೈತ ಸಂಘಟನೆಗಳಿಂದ ಇಂದು ಭಾರತ್ ಬಂದ್

ಶಮಿನ್‌ ಜಾಯ್‌
Published 16 ಫೆಬ್ರುವರಿ 2024, 3:29 IST
Last Updated 16 ಫೆಬ್ರುವರಿ 2024, 3:29 IST
   

ನವದೆಹಲಿ: ನರೇಂದ್ರ ಮೋದಿ ಸರ್ಕಾರದಿಂದ ದೇಶದ ಜನರ ಮೇಲೆ ಕಾರ್ಪೊರೇಟ್, ಕೋಮು, ಅಧಿಕಾರಶಾಹಿ ದಾಳಿಗಳು ಹೆಚ್ಚುತ್ತಿವೆ ಎಂದು ಆರೋಪಿಸಿ, ಸಂಯುಕ್ತ ಕಿಸಾನ್ ಮೋರ್ಚಾ ಮತ್ತು ಕೇಂದ್ರೀಯ ವ್ಯಾಪಾರಿ ಸಂಘಟನೆಗಳು ಇಂದು ಭಾರತ್ ಬಂದ್‌ಗೆ ಕರೆ ನೀಡಿವೆ.

ವ್ಯಾಪಾರಿಗಳು ಮತ್ತು ಸಾರಿಗೆ ವಲಯದ ಮಾಲೀಕರಿಗೂ ಬಂದ್‌ಗೆ ಬೆಂಬಲ ನೀಡುವಂತೆ ಕೋರಲಾಗಿದೆ.

‘ಫೆಬ್ರುವರಿ 16ರಂದು ನಾವು ಭಾರತ ಬಂದ್‌ಗೆ ಕರೆ ನೀಡಿದ್ದೇವೆ. ಸಂಯುಕ್ತ ಕಿಸಾನ್ ಮೋರ್ಚಾ ಸೇರಿ ಹಲವು ರೈತ ಸಂಘಟನೆಗಳು ಈ ಬಂದ್‌ಗೆ ಬೆಂಬಲ ನೀಡಿವೆ. ರೈತರು ಸಹ ಹೊಲಕ್ಕೆ ಹೋಗುವುದಿಲ್ಲ’ ಎಂದು ಭಾರತೀಯ ಕಿಸಾನ್ ಯೂನಿಯನ್‌ನ ನರೇಂದ್ರ ಟಿಕಾಯತ್ ಬುಧವಾರ ಹೇಳಿದ್ದರು.

ADVERTISEMENT

‘ಎಂಎಸ್‌ಪಿಗೆ ಕಾನೂನಿನ ಖಾತರಿ, ನಿರುದ್ಯೋಗ, ಅಗ್ನಿವೀರ್ ಯೋಜನೆಗೆ ವಿರೋಧ, ಪಿಂಚಣಿ ಯೋಜನೆ ಇವೇ ಮುಂತಾದ ಬೇಡಿಕೆಗಳೂ ಬಂದ್‌ನಲ್ಲಿ ಸೇರಿವೆ’ಎಂದು ಅವರು ಹೇಳಿದ್ದಾರೆ.

ಎಸ್‌ಕೆಎಂ ಮತ್ತು ಕೇಂದ್ರೀಯ ವ್ಯಾಪಾರಿ ಸಂಘಟನೆಗಳ ಜಂಟಿ ಹೇಳಿಕೆಯಲ್ಲಿ, ವಿದ್ಯಾರ್ಥಿಗಳು, ಯುವಕರು, ಮಹಿಳೆಯರು, ಪಿಂಚಣಿದಾರರು, ಸಣ್ಣ ವ್ಯಾಪಾರಿಗಳು, ಟ್ರಕ್ ಆಪರೇಟರ್‌ಗಳು, ವೃತ್ತಿಪರರು, ಪತ್ರಕರ್ತರು ಮತ್ತು ಸಾಂಸ್ಕೃತಿಕ ಹೋರಾಟಗಾರರಿಗೆ ಜನರ ಜೀವನದ ಬಗೆಗಿನ ನಿಜವಾದ ವಿಷಯಗಳನ್ನು ರಾಷ್ಟ್ರೀಯ ಅಜೆಂಡಾ ಮಾಡಲು ಬಂದ್‌ಗೆ ಸಹಕರಿಸುವಂತೆ ಮನವಿ ಮಾಡಲಾಗಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.