ಚಂಡೀಗಢ: ಜಲಂಧರ್ ಜಿಲ್ಲೆಯ ರೈತರೊಬ್ಬರು ಬಿತ್ತನೆ ಬೀಜಗಳನ್ನು ಉಚಿತವಾಗಿ ನೀಡಿ ಪಂಜಾಬ್‌ನ ಪ್ರವಾಹಪೀಡಿತ ರೈತರಿಗೆ ಆಸರೆಯಾಗುತ್ತಿದ್ದಾರೆ.
ರೈತ ಬಲದೇವ್ ಸಿಂಗ್ ಜಲಂಧರ್ ಜಿಲ್ಲೆಯ ಶಾಹಕೋಟ್ ಪ್ರದೇಶದಲ್ಲಿ ಭತ್ತ ಬೆಳೆದಿದ್ದರು. ಪ್ರವಾಹದಲ್ಲಿ ಸಿಕ್ಕಿ ಬೆಳೆ ಹಾನಿಯಾಗಿದೆ. ಆದರೂ ಅವರು, ಪ್ರವಾಹ ಪೀಡಿತ ಪ್ರದೇಶದ ರೈತರಿಗೆ ಅಲ್ಪಾವಧಿಯ ಆರ್‌ಆರ್ 126 ತಳಿಯ ಬಿತ್ತನೆ ಬೀಜ ಭತ್ತವನ್ನು ಉಚಿತವಾಗಿ ನೀಡುತ್ತಿದ್ದಾರೆ.
‘ನನ್ನ ಬಳಿ 70ರಿಂದ 80 ಕ್ವಿಂಟಲ್ ಪಿಆರ್ 126 ತಳಿಯ ಬಿತ್ತನೆ ಬೀಜ ಭತ್ತವಿದ್ದು, ಪ್ರವಾಹ ಪೀಡಿತ ರೈತರಿಗೆ ಉಚಿತವಾಗಿ ನೀಡುತ್ತಿದ್ದೇನೆ’ ಎಂದು ಶಾಹಕೋಟ್‌ನ ಗಟ್ಟಿ ರಾಯ್‌ಪುರ ಗ್ರಾಮದ ಬಲದೇವ್ ಸಿಂಗ್ ಸುದ್ದಿಸಂಸ್ಥೆ ತಿಳಿಸಿದರು.
ಕಳೆದ ವಾರ ರಾಜ್ಯವನ್ನು ಪೀಡಿಸಿದ ಪ್ರವಾಹದಲ್ಲಿ ಬಲದೇವ್ ಸಿಂಗ್ ಅವರು 50ರಿಂದ 60 ಎಕರೆಗಳಲ್ಲಿ ಬೆಳೆದ ಭತ್ತದ ಬೆಳೆಯನ್ನು ಕಳೆದುಕೊಂಡಿದ್ದಾರೆ.
ಪ್ರವಾಹ ಕಾಣಿಸದ ಮುಕ್ತಸರ್ ಜಿಲ್ಲೆಯ ರೈತ ಕುಲ್ವೀರ್ ಸಿಂಗ್ ಅವರು ಪಿಬಿ 1629 ಬಾಸ್ಮತಿ ತಳಿಯ ನಾಲ್ಕು ಕ್ವಿಂಟಲ್‌ಗಿಂತಲೂ ಹೆಚ್ಚಿನ ಬಿತ್ತನೆ ಬೀಜವನ್ನು ಹಲವು ಬೆಳೆಗಾರರಿಗೆ ಉಚಿತವಾಗಿ ನೀಡಿದ್ದಾರೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.