ADVERTISEMENT

ಚಿತ್ರಾವಳಿ: ಚಳಿಯಲ್ಲೂ ಛಲ ಬಿಡದ ರೈತರಿಂದ ಭಾರಿ ಪ್ರತಿಭಟನೆ

ನವದೆಹಲಿ: ಮೂರು ಕೃಷಿ ಕಾಯ್ದೆಗಳನ್ನು ಹಿಂಪಡೆಯುವಂತೆ ಆಗ್ರಹಿಸಿ ದೆಹಲಿ ಗಡಿ ಪ್ರದೇಶಗಳಲ್ಲಿ ರೈತರು ನಡೆಸುತ್ತಿರುವ ಪ್ರತಿಭಟನೆ 12ನೇ ದಿನಕ್ಕೆ ಕಾಲಿಟ್ಟಿದೆ. ದೆಹಲಿ-ಹರಿಯಾಣ ಗಡಿಯಲ್ಲಿ ಪ್ರತಿಭಟನೆಯ ಕಾವು ತೀವ್ರಗೊಂಡಿದೆ. ಈ ಮಧ್ಯೆ ಡಿಸೆಂಬರ್ 8ರಂದು ದೇಶದಾದ್ಯಂತ 'ಭಾರತ ಬಂದ್'ಗೆ ಕರೆ ನೀಡಲಾಗಿದೆ. ರೈತರ ಪ್ರತಿಭಟನೆಯ ಚಿತ್ರಗಳು ಇಲ್ಲಿವೆ... (ಎಎಫ್‌ಪಿ ಚಿತ್ರಗಳು)ಇನ್ನಷ್ಟು ಸುದ್ದಿಭಾರತ್ ಬಂದ್ ರಾಜಕೀಯ ಬಂದ್ ಅಲ್ಲ: ಶಿವಸೇನಾ ’ಭಾರತ್ ಬಂದ್‌‘ ಬೆಂಬಲಿಸಿ; ಸಾರ್ವಜನಿಕರಲ್ಲಿ ‍ಪ್ರತಿಭಟನಾಪ್ರತಿಭಟನಾ ರ‌್ಯಾಲಿಗೆ ತಡೆಯೊಡ್ಡಲು ಅಖಿಲೇಶ್ ಯಾದವ್ ಮನೆಯ ಹೊರಗೆ ಬ್ಯಾರಿಕೇಡ್ ಕಾರರ ಮನವಿ

​ಪ್ರಜಾವಾಣಿ ವಾರ್ತೆ
Published 7 ಡಿಸೆಂಬರ್ 2020, 9:29 IST
Last Updated 7 ಡಿಸೆಂಬರ್ 2020, 9:29 IST
ಪ್ರತಿಭಟನೆಯನ್ನು ತಡೆಯಲು ಪೊಲೀಸರಿಂದ ಸರ್ವ ಪ್ರಯತ್ನ; ಈ ಮಧ್ಯೆ ರೈತರೊಬ್ಬರು ಪತ್ರಿಕೆ ಓದುತ್ತಿರುವುದು.
ಪ್ರತಿಭಟನೆಯನ್ನು ತಡೆಯಲು ಪೊಲೀಸರಿಂದ ಸರ್ವ ಪ್ರಯತ್ನ; ಈ ಮಧ್ಯೆ ರೈತರೊಬ್ಬರು ಪತ್ರಿಕೆ ಓದುತ್ತಿರುವುದು.    
ದೆಹಲಿ-ಹರಿಯಾಣ ಗಡಿ ಪ್ರದೇಶದಲ್ಲಿ ಬೃಹತ್ ಪ್ರತಿಭಟನೆ
ದೆಹಲಿ-ಹರಿಯಾಣ ರಾಜ್ಯ ಹೆದ್ದಾರಿ ಕುಂಡ್ಲಿಯಲ್ಲಿ ಕಾಗದಗಳನ್ನು ಹೊತ್ತಿಸಿಕೊಂಡು ಮೈ ಬಿಸಿ ಮಾಡುತ್ತಿರುವ ಪ್ರತಿಭಟನಾ ನಿರತ ರೈತರು.
ದೆಹಲಿಯ ಗಡಿಯಲ್ಲಿ ಬೀಡು ಬಿಟ್ಟಿರುವ ಅನ್ನದಾತರು, ರಸ್ತೆ ಬದಿಯಲ್ಲಿ ಸ್ನಾನ ಮಾಡಿ, ಬಟ್ಟೆ ಒಗೆಯುತ್ತಿರುವ ಚಿತ್ರ
ಕೃಷಿ ಚಟುವಟಿಕೆಗಳಿಗಾಗಿ ಬಳಕೆ ಮಾಡುವ ಟ್ರ್ಯಾಕ್ಟರ್ ಸಮೇತ ಆಗಮಿಸಿರುವ ರೈತರು ಬೃಹತ್ ಪ್ರತಿಭಟನೆಯಲ್ಲಿ ಭಾಗಿಯಾಗಿದ್ದಾರೆ
ಪಂಜಾಬ್ ಲೂಧಿಯಾನ ಜಿಲ್ಲೆಯ ಸಿಖ್ಖ್ ರೈತರೊಬ್ಬರು ಧಾರ್ಮಿಕ ಸಂಪ್ರದಾಯದ ಭಾಗವಾಗಿ 'ಕಿರ್ಪನ್' (ಕತ್ತಿ) ಹಿಡಿದು ಪ್ರತಿಭಟನೆಯಲ್ಲಿ ಭಾಗವಹಿಸಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.