ಜೈಪುರ: ಮೊದಲ ಸಾರಿ ಗಂಡನ ಮನೆಗೆ ಮಗಳನ್ನು ಕಳಿಸಲು ಇಲ್ಲೊಬ್ಬ ತಂದೆ ಹೆಲಿಕಾಪ್ಟರ್ ವ್ಯವಸ್ಥೆ ಮಾಡಿದ್ದಾರೆ. ಆ ಮೂಲಕ ತವರು ಮನೆ ರಾಜಸ್ಥಾನದ ಜುಂಜುನು ಎಂಬ ಪಟ್ಟಣದಿಂದ ಗಂಡನ ಊರು ಸುಲ್ತಾನಾದವರೆಗೆ ವಧು ರೀನಾ ಮತ್ತು ಅವಳ ಗಂಡ ಸಂದೀಪ್ ಹೆಲಿಕಾಪ್ಟರ್‌ನಲ್ಲಿ ತೆರಳಿದ್ದಾರೆ.
ಮಗಳನ್ನು ಮೊದಲ ಸಾರಿ ಗಂಡನ ಮನೆಗೆ ಕಳಿಸುವ ವೇಳೆ ಹೆಲಿಕಾಪ್ಟರ್‌ನಲ್ಲಿ ಕಳಿಸಬೇಕೆಂಬುದುರೀನಾ ತಂದೆ ಮಹೇಂದ್ರ ಸಿಂಗ್ ಅವರ ಬಯಕೆಯಾಗಿತ್ತು. ರೀನಾ ಮದುವೆಗೂ ಎರಡು ತಿಂಗಳು ಮುಂಚೆ ಮಹೇಂದ್ರ ಸಿಂಗ್ ತಮ್ಮ ಬಯಕೆಯನ್ನು ಪರಿವಾರದೊಂದಿಗೆ ಹಂಚಿಕೊಂಡಿದ್ದರು ಎನ್ನಲಾಗಿದೆ.
ಸ್ನಾತಕೋತ್ತರ ಪದವಿ ಓದುತ್ತಿರುವ ರೀನಾಳ ಪತಿ ಸಂದೀಪ್ ಮಹಾರಾಷ್ಟ್ರದ ನಾಸಿಕ್‌ನಲ್ಲಿ ರೈಲ್ವೆ ಸ್ಟೇಷನ್ ಮಾಸ್ಟರ್ ಆಗಿ ಕೆಲಸ ಮಾಡುತ್ತಿದ್ದಾರೆ.
ಜುಂಜುನು ಪಟ್ಟಣದಲ್ಲಿ ಹೆಲಿಕಾಪ್ಟರ್ ನೋಡಲು ಶಾಲಾ ಮಕ್ಕಳು ಸೇರಿದಂತೆ ನೂರಾರು ಜನರು ನೆರೆದಿದ್ದರು ಎನ್ನಲಾಗಿದೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.