ಫರೀದಾಬಾದ್: ಸೊಸೆಯನ್ನು ಹತ್ಯೆ ಮಾಡಿ, ಮೃತದೇಹವನ್ನು ಮನೆಯ ಮುಂದೆ ಹೂತು ಹಾಕಿ, ಆ ಗುಂಡಿಯನ್ನು ಕಾಂಕ್ರೀಟ್‌ನಿಂದ ಮುಚ್ಚಿಸಿದ್ದ 54 ವರ್ಷದ ವ್ಯಕ್ತಿಯನ್ನು ಪೊಲೀಸರು ಬಂಧಿಸಿದ್ದಾರೆ.
ಇಲ್ಲಿಯ ರೋಷನ್ ನಗರ ನಿವಾಸಿ ಭೂಪ್ ಸಿಂಗ್, ಏ.21ರಂದು ಮನೆಯಲ್ಲಿ ಯಾರೂ ಇಲ್ಲದ ಸಂದರ್ಭದಲ್ಲಿ ಸೊಸೆ ತನ್ನೂ ಕುಮಾರ್ ಕೋಣೆಗೆ ಹೋಗಿ, ಆಕೆಯ ದುಪಟ್ಟಾವನ್ನು ಕತ್ತಿಗೆ ಸುತ್ತಿ ಹತ್ಯೆ ಮಾಡಿದ್ದಾರೆ.
‘ತನ್ನೂಳಿಂದಾಗಿ ಮನೆಯ ಸದಸ್ಯರಲ್ಲಿ ವೈಮನಸ್ಸು ಉಂಟಾಗಿತ್ತು. ಹೀಗಾಗಿ ನಾನು ಆಕೆಯನ್ನು ಕೊಂದೆ’ ಎಂದು ಭೂಪ್ ಹೇಳಿದ್ದಾರೆ. ಆದರೆ ಇದು ವರದಕ್ಷಿಣೆಗಾಗಿ ನಡೆಸಿದ ಕ್ರೌರ್ಯ ಎಂದು ಕಂಡುಬಂದಿದೆ. ಕೊಲೆಗೆ ನಿಖರ ಕಾರಣದ ಕುರಿತು ತನಿಖೆ ಮಾಡಲಾಗುತ್ತಿದೆ’ ಎಂದು ಪೊಲೀಸರು ತಿಳಿಸಿದ್ದಾರೆ.
ಭೂಪ್ ಸಿಂಗ್ ಅವರನ್ನು ಎರಡು ದಿನ ಪೊಲೀಸ್ ಕಸ್ಟಡಿಗೆ ನೀಡಿ ನ್ಯಾಯಾಲಯ ಆದೇಶಿಸಿದೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.