ADVERTISEMENT

ಪುಣೆ: ವಾಟ್ಸ್‌ಆ್ಯಪ್‌ನಲ್ಲೇ ಪತ್ನಿಗೆ ತ್ರಿವಳಿ ತಲಾಕ್, ಎಫ್ಐಆರ್ ದಾಖಲು

ಪಿಟಿಐ
Published 12 ಅಕ್ಟೋಬರ್ 2021, 17:05 IST
Last Updated 12 ಅಕ್ಟೋಬರ್ 2021, 17:05 IST
ಎಎಫ್‌ಪಿ ಚಿತ್ರ
ಎಎಫ್‌ಪಿ ಚಿತ್ರ   

ಪುಣೆ: ವಾಟ್ಸ್‌ಆ್ಯಪ್‌ ಸಂದೇಶದ ಮೂಲಕ ತ್ರಿವಳಿ ತಲಾಕ್ ಅಥವಾ ವಿಚ್ಛೇದನ ನೀಡಿದ ಆರೋಪದ ಮೇಲೆ ಪತಿಯ ವಿರುದ್ಧ ಪುಣೆಯ 28 ವರ್ಷದ ಮಹಿಳೆ ಪ್ರಕರಣ ದಾಖಲಿಸಿದ್ದಾರೆ ಎಂದು ಪೊಲೀಸರು ಮಂಗಳವಾರ ತಿಳಿಸಿದ್ದಾರೆ.

ತ್ರಿವಳಿ ತಲಾಕ್ ನಿಷೇಧಿಸುವ ಮುಸ್ಲಿಂ ಮಹಿಳೆಯರ (ವಿವಾಹದ ಹಕ್ಕುಗಳ ರಕ್ಷಣೆ) ಕಾಯ್ದೆ 2019 ಮತ್ತು ಭಾರತೀಯ ದಂಡ ಸಂಹಿತೆಯ ಕಾಯ್ದೆಗಳ ಅಡಿಯಲ್ಲಿ ಸಂತ್ರಸ್ತ ಮಹಿಳೆಯ ಅತ್ತೆಯ ವಿರುದ್ಧವೂ ಪೊಲೀಸರು ಪ್ರಕರಣ ದಾಖಲಿಸಿದ್ದಾರೆ,

‘ಮಹಿಳೆಯು ತನ್ನ ಗಂಡ ಮತ್ತು ಅತ್ತೆಯಿಂದ ದೈಹಿಕ ಮತ್ತು ಮಾನಸಿಕ ಕಿರುಕುಳಕ್ಕೆ ಒಳಗಾಗಿದ್ದು, ಫ್ಲ್ಯಾಟ್, ಏರ್ ಕೂಲರ್ ಮುಂತಾದ ವಸ್ತುಗಳ ಖರೀದಿಗೆ ಹೆತ್ತವರಿಂದ ಹಣವನ್ನು ತರುವಂತೆ ಪೀಡಿಸಿದ್ದರು. ಬಳಿಕ, ಮಹಿಳೆ ಮತ್ತು ಆಕೆಯ ಮಗಳನ್ನು ಈ ವರ್ಷದ ಆರಂಭದಲ್ಲಿ ತವರು ಮನೆಗೆ ಕಳುಹಿಸಲಾಗಿದೆ’ ಎಂದು ಸಮರ್ಥ ಪೊಲೀಸ್ ಠಾಣೆಯ ಪೊಲೀಸ್ ಅಧಿಕಾರಿಯೊಬ್ಬರು ಹೇಳಿದ್ದಾರೆ.

ADVERTISEMENT

ಈ ವರ್ಷದ ಮಾರ್ಚ್ 10ರಂದು ಆರೋಪಿಯು ತನ್ನ ಪತ್ನಿಗೆ ಮೂರು ಬಾರಿ ವಾಟ್ಸ್‌ಆ್ಯಪ್‌ನಲ್ಲಿ 'ತಲಾಕ್' ಎಂದು ಸಂದೇಶ ಕಳುಹಿಸಿದ್ದಾನೆ. ‘ಈ ಸಂಬಂಧ ಮಹಿಳೆ ತನ್ನ ಪತಿ ಮತ್ತು ಅತ್ತೆಯ ವಿರುದ್ಧ ಸೋಮವಾರ ದೂರು ದಾಖಲಿಸಿದರು’ಎಂದು ಅವರು ಹೇಳಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.