ADVERTISEMENT

ತಿರುಚಿದ ವಿಡಿಯೊ ಶೇರ್ ಮಾಡಿದ ದಿಗ್ವಿಜಯ ಸಿಂಗ್ ವಿರುದ್ಧ ಎಫ್‌ಐಆರ್

ಏಜೆನ್ಸೀಸ್
Published 15 ಜೂನ್ 2020, 11:11 IST
Last Updated 15 ಜೂನ್ 2020, 11:11 IST
ದಿಗ್ವಿಜಯ ಸಿಂಗ್
ದಿಗ್ವಿಜಯ ಸಿಂಗ್   

ಭೋಪಾಲ್:ಮಧ್ಯಪ್ರದೇಶದ ಮುಖ್ಯಮಂತ್ರಿ ಶಿವರಾಜ್ಸಿಂಗ್ ಚೌಹಾಣ್ ಬಗ್ಗೆ ತಿರುಚಿದವಿಡಿಯೊವೊಂದನ್ನು ಸಾಮಾಜಿಕ ಮಾಧ್ಯಮಗಳಲ್ಲಿ ಶೇರ್ ಮಾಡಿದ ಆರೋಪದಲ್ಲಿ ಕಾಂಗ್ರೆಸ್ ನಾಯಕ ದಿಗ್ವಿಜಯ ಸಿಂಗ್ ವಿರುದ್ಧ ಭೋಪಾಲ್ಪೊಲೀಸರಅಪರಾಧ ದಳ ಎಫ್‌ಐಆರ್ ದಾಖಲಿಸಿದೆ.

ಫೇಕ್ ವಿಡಿಯೊ ಶೇರ್ ಮಾಡಿದ್ದಕ್ಕೆ ಸಿಂಗ್ ವಿರುದ್ಧ ಬಿಜೆಪಿ ದೂರು ದಾಖಲಿಸಿತ್ತು. ವಿಡಿಯೊವೊಂದನ್ನು ತಿರುಚಿ ಸಾಮಾಜಿಕ ಮಾಧ್ಯಮಗಳಲ್ಲಿ ಶೇರ್ ಮಾಡಿದ್ದಕ್ಕೆ ಮಧ್ಯ ಪ್ರದೇಶದ ಮಾಜಿ ಸಚಿವ ಉಮಾಶಂಕರ್ ಗುಪ್ತಾ ಅವರ ನೇತೃತ್ವದಲ್ಲಿ ಬಿಜೆಪಿ ಭೋಪಾಲ್‌ ಪೊಲೀಸರ ಅಪರಾಧ ದಳಕ್ಕೆ ದೂರು ಸಲ್ಲಿಸಿತ್ತು. ಭಾನುವಾರ ಪೊಲೀಸರು ಸಿಂಗ್ ವಿರುದ್ಧ ದೂರು ದಾಖಲಿಸಿದ್ದರು.

ಕಮಲ್‌ನಾಥ್ ಸರ್ಕಾರದ ಮದ್ಯನೀತಿ ವಿರೋಧಿಸಿ ಚೌಹಾಣ್ ಹೇಳಿಕೆ ನೀಡಿದ್ದರು ಎಂದು ಬಿಜೆಪಿ ಹೇಳಿದೆ.

ADVERTISEMENT

ಮುಖ್ಯಮಂತ್ರಿ ಶಿವರಾಜ್ ಸಿಂಗ್ ಚೌಹಾಣ್ ಅವರ ಹಳೇ ವಿಡಿಯೊವೊಂದನ್ನು ತಿರುಚಿ ಸಾಮಾಜಿಕ ಮಾಧ್ಯಮದಲ್ಲಿ ಶೇರ್ ಮಾಡುವ ಮೂಲಕ ಅವರ ಘನತೆಗೆ ಧಕ್ಕೆ ತರುವ ಪ್ರಯತ್ನ ಮಾಡಲಾಗಿದೆ. ಸೈಬರ್ ಕಾಯ್ದೆ ಅಡಿಯಲ್ಲಿ ಎಫ್‌ಐಆರ್ ದಾಖಲಿಸಿ ತನಿಖೆ ನಡೆಸಲಾಗುತ್ತಿದೆ ಎಂದು ಭೋಪಾಲ್ ಡಿಐಜಿ ಇರ್ಷಾದ್ ವಾಲಿ ಟ್ವೀಟಿಸಿದ್ದಾರೆ.

2.19 ನಿಮಿಷ ಅವಧಿಯ ವಿಡಿಯೊವೊಂದನ್ನು ತಿರುಚಿ ಅದರ 9 ಸೆಕೆಂಡ್ ಅವಧಿಯ ತುಣುಕೊಂದನ್ನು ದಿಗ್ವಿಜಯ್ ಸಿಂಗ್ ಟ್ವಿಟರ್‌ನಲ್ಲಿ ಶೇರ್ ಮಾಡಿದ್ದು, ಮುಖ್ಯಮಂತ್ರಿಯವರ ವ್ಯಕ್ತಿತ್ವಕ್ಕೆ ಧಕ್ಕೆ ತರಲು ಸಿಂಗ್ ಪ್ರಯತ್ನಿಸಿದ್ದಾರೆ.ಹಾಗಾಗಿ ಸಿಂಗ್ ಮತ್ತು ಅವರ ಸಹಚರರ ವಿರುದ್ಧ ಕೇಸು ದಾಖಲಿಸಬೇಕು ಎಂದು ಬಿಜೆಪಿ ದೂರು ನೀಡಿತ್ತು.

ಆದಾಗ್ಯೂ, ದಿಗ್ವಿಜಯ್ ಸಿಂಗ್ ಶೇರ್ ಮಾಡಿದ ವಿಡಿಯೊ ವೈರಲ್ ಆಗುತ್ತಿದ್ದಂತೆ ಅದರ ನಿಜವಾದ ವಿಡಿಯೊ ತುಣುಕನ್ನು ಚೌಹಾಣ್ ಟ್ವೀಟಿಸಿದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.