ADVERTISEMENT

ಸುಳ್ಳು ಮಾಹಿತಿ ನೀಡಿ ಬಾರ್‌ ಲೈಸನ್ಸ್‌ ಪಡೆದ ಸಮೀರ್ ವಾಂಖೆಡೆ: ಎಫ್‌ಐಆರ್ ದಾಖಲು

ಐಎಎನ್ಎಸ್
Published 20 ಫೆಬ್ರುವರಿ 2022, 5:34 IST
Last Updated 20 ಫೆಬ್ರುವರಿ 2022, 5:34 IST
ಸಮೀರ್‌ ವಾಂಖೆಡೆ
ಸಮೀರ್‌ ವಾಂಖೆಡೆ   

ಮುಂಬೈ: ಮಾದಕವಸ್ತು ನಿಗ್ರಹ ಸಂಸ್ಥೆಯ (ಎನ್‌ಸಿಬಿ) ಮಾಜಿ ವಲಯ ನಿರ್ದೇಶಕ ಸಮೀರ್‌ ವಾಂಖೆಡೆ ವಿರುದ್ಧ ಸುಳ್ಳು ಮಾಹಿತಿ ಒದಗಿಸಿ ಬಾರ್‌ ಲೈಸನ್ಸ್ ಪಡೆದ ಆರೋಪ ಕೇಳಿಬಂದಿದೆ.

ಪ್ರಕರಣ ಸಂಬಂಧ ಥಾಣೆ ಜಿಲ್ಲೆಯ ಕೊಪ್ರಿ ಪೊಲೀಸ್ ಠಾಣೆಯಲ್ಲಿ ಶನಿವಾರ ರಾತ್ರಿ 8 ಗಂಟೆ ಸುಮಾರಿಗೆ ಎಫ್‌ಐಆರ್ ದಾಖಲಾಗಿದೆ ಎಂದು ಪೊಲೀಸರು ತಿಳಿಸಿದ್ದಾರೆ.

ಸಮೀರ್‌ ವಾಂಖೆಡೆ ಅವರು ಸದ್ಗುರು ಫ್ಯಾಮಿಲಿ ಬಾರ್‌ ಆ್ಯಂಡ್ ರೆಸ್ಟೋರೆಂಟ್‌ನ ಮಾಲೀಕರಾಗಿದ್ದಾರೆ. ಅವರು 1997ರ ಅ.29ರಂದು ಬಾರ್‌ ಲೈಸನ್ಸ್‌ ಪಡೆದಿದ್ದರು. ಆದರೆ, ತಮ್ಮ ಜನ್ಮ ದಿನಾಂಕದ ಕುರಿತು ಸರ್ಕಾರಕ್ಕೆ ತಪ್ಪು ಮಾಹಿತಿ ಒದಗಿಸಿದ್ದಾರೆ ಎನ್ನಲಾಗಿದೆ.

ADVERTISEMENT

ದಾಖಲೆಗಳ ಪ್ರಕಾರ ವಾಂಖೆಡೆ ಅವರು ಲೈಸನ್ಸ್‌ ಪಡೆದಾಗ ಅವರಿಗೆ 17 ವರ್ಷ, ಹನ್ನೊಂದು ತಿಂಗಳು ವಯಸ್ಸಾಗಿತ್ತು. ಈ ಹಿನ್ನೆಲೆಯಲ್ಲಿ ಸರ್ಕಾರಕ್ಕೆ ತಪ್ಪು ಮಾಹಿತಿ ನೀಡಿರುವುದು ಸಾಬೀತಾಗಿದೆ ಎಂದು ಪೊಲೀಸ್ ಮೂಲಗಳು ತಿಳಿಸಿವೆ.

ಸಮೀರ್ ವಾಂಖೆಡೆ ಅವರು ಸುಳ್ಳು ಮಾಹಿತಿ ನೀಡಿ ಬಾರ್ ಲೈಸನ್ಸ್ ಪಡೆದಿದ್ದಾರೆ ಎಂದು ಮಹಾರಾಷ್ಟ್ರ ಸಚಿವ ನವಾಬ್ ಮಲಿಕ್ ಅವರು 2021ರ ನವೆಂಬರ್‌ನಲ್ಲಿ ಆರೋಪಿಸಿದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.