ADVERTISEMENT

ತಿರುಪತಿ ತಿರುಮಲ ದೇವಾಲಯದ ಲಡ್ಡು ಪ್ರಸಾದ ನೀಡುವ ಕೌಂಟರ್‌ನಲ್ಲಿ ಅಗ್ನಿ ಆಕಸ್ಮಿಕ

ಏಜೆನ್ಸೀಸ್
Published 13 ಜನವರಿ 2025, 11:17 IST
Last Updated 13 ಜನವರಿ 2025, 11:17 IST
<div class="paragraphs"><p>ತಿರುಮಲ ತಿರುಪತಿ ದೇವಸ್ಥಾನ ಮತ್ತು&nbsp;ತಿರುಪತಿ ಲಡ್ಡು</p></div>

ತಿರುಮಲ ತಿರುಪತಿ ದೇವಸ್ಥಾನ ಮತ್ತು ತಿರುಪತಿ ಲಡ್ಡು

   

ತಿರುಪತಿ: ಆಂಧ್ರಪ್ರದೇಶದ ತಿರುಪತಿ ತಿರುಮಲ ದೇವಾಲಯದ ಲಡ್ಡು ಪ್ರಸಾದ ನೀಡುತ್ತಿದ್ದ ಕೌಂಟರ್‌ನಲ್ಲಿ ಸೋಮವಾರ ಅಗ್ನಿ ಅವಘಡ ಸಂಭವಿಸಿದೆ.

ಕಂಪ್ಯೂಟರ್‌ಗೆ ಹೊಂದಿಕೊಂಡಿದ್ದ ಯುಪಿಎಸ್‌ನಲ್ಲಿ ಶಾರ್ಟ್‌ ಸರ್ಕೀಟ್‌ ಉಂಟಾದ ಕಾರಣ 47ನೇ ಕೌಂಟರ್‌ನಲ್ಲಿ ಏಕಾಏಕಿ ಬೆಂಕಿ ಕಾಣಿಸಿಕೊಂಡಿದೆ. ತಕ್ಷಣವೇ ಸಿಬ್ಬಂದಿ ಸ್ಥಳಕ್ಕೆ ಧಾವಿಸಿ ಬೆಂಕಿ ಹರಡುವುದನ್ನು ನಿಯಂತ್ರಣಕ್ಕೆ ತಂದಿದ್ದಾರೆ ಎಂದು ಟಿಟಿಡಿ ಹೇಳಿರುವುದಾಗಿ ವರದಿಯಾಗಿದೆ.

ADVERTISEMENT

ಬೆಂಕಿ ಕಾಣಿಸಿಕೊಂಡ ಕಾರಣ ಪ್ರಸಾದ ಪಡೆಯಲು ಸರತಿ ಸಾಲಿನಲ್ಲಿ ನಿಂತಿದ್ದ ಜನ ಓಡಿದ್ದು, ಸ್ಥಳದಲ್ಲಿ ಕೆಲಕಾಲ ಆತಂಕದ ವಾತಾವರಣ ನಿರ್ಮಾಣವಾಗಿತ್ತು ಎಂದು ತಿಳಿದುಬಂದಿದೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.