ADVERTISEMENT

ಅಹಮದಾಬಾದ್: ನಿರ್ಮಾಣ ಹಂತದ ಸಬರಮತಿ ಬುಲೆಟ್ ರೈಲು ನಿಲ್ದಾಣದಲ್ಲಿ ಬೆಂಕಿ ಅವಘಡ

ಪಿಟಿಐ
Published 8 ಫೆಬ್ರುವರಿ 2025, 6:42 IST
Last Updated 8 ಫೆಬ್ರುವರಿ 2025, 6:42 IST
<div class="paragraphs"><p>ಬೆಂಕಿ ಅವಘಡ</p></div>

ಬೆಂಕಿ ಅವಘಡ

   

(ಸಾಂಕೇತಿಕ ಚಿತ್ರ)

ಅಹಮದಾಬಾದ್: ನಿರ್ಮಾಣ ಹಂತದಲ್ಲಿರುವ ಸಬರಮತಿ ಬುಲೆಟ್ ರೈಲು ನಿಲ್ದಾಣದಲ್ಲಿ ಇಂದು (ಶನಿವಾರ) ಮುಂಜಾನೆ ಬೆಂಕಿ ಅವಘಡ ಸಂಭವಿಸಿದೆ ಎಂದು ಅಧಿಕಾರಿಯೊಬ್ಬರು ತಿಳಿಸಿದ್ದಾರೆ.

ADVERTISEMENT

ಬೆಳಿಗ್ಗೆ 6.30ರ ಸುಮಾರಿಗೆ ಸಂಭವಿಸಿದ ಅವಘಡದಲ್ಲಿ ಯಾವುದೇ ಸಾವುನೋವು ಸಂಭವಿಸಿಲ್ಲ ಎಂದು ಅಗ್ನಿಶಾಮಕ ಇಲಾಖೆಯ ಅಧಿಕಾರಿಯೊಬ್ಬರು ಹೇಳಿದ್ದಾರೆ.

13 ಅಗ್ನಿಶಾಮಕ ವಾಹನಗಳು ಕಾರ್ಯಾಚರಣೆಗೆ ಇಳಿದಿದ್ದು, ಸದ್ಯ ಬೆಂಕಿಯನ್ನು ನಿಯಂತ್ರಣಕ್ಕೆ ತರಲಾಗಿದೆ ಎಂದು ಅವರು ತಿಳಿಸಿದ್ದಾರೆ.

ನಿರ್ಮಾಣ ಸ್ಥಳದ ಒಂದು ಭಾಗದ ಛಾವಣಿಯ ಶಟರಿಂಗ್‌ನಲ್ಲಿ ಬೆಂಕಿ ಕಾಣಿಸಿಕೊಂಡಿದೆ ಎಂದು ಯೋಜನೆಯ ಜವಾಬ್ದಾರಿ ಹೊತ್ತ ನ್ಯಾಷನಲ್ ಹೈ ಸ್ಪೀಡ್ ರೈಲು ನಿಗಮ ಲಿಮಿಟೆಡ್ (NHSRCL) ತನ್ನ ಹೇಳಿಕೆಯಲ್ಲಿ ತಿಳಿಸಿದೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.