ADVERTISEMENT

ಅಮೆರಿಕದಲ್ಲಿ ಅಗ್ನಿ ಅವಘಡ: ತೆಲಂಗಾಣದ ಮೂವರು ಸಾವು

​ಪ್ರಜಾವಾಣಿ ವಾರ್ತೆ
Published 26 ಡಿಸೆಂಬರ್ 2018, 18:38 IST
Last Updated 26 ಡಿಸೆಂಬರ್ 2018, 18:38 IST
ಅನಾಹುತದಲ್ಲಿ ಮೃತಪಟ್ಟ ಮಕ್ಕಳು
ಅನಾಹುತದಲ್ಲಿ ಮೃತಪಟ್ಟ ಮಕ್ಕಳು   

ಹೈದರಾಬಾದ್‌: ಅಮೆರಿಕದ ಟೆನ್ನೆಸ್ಸಿಯ ಸಮೀಪದ ನಿವಾಸದಲ್ಲಿ ಸಂಭವಿಸಿದ ಭಾರಿ ಅಗ್ನಿ ಅವಘಡದಲ್ಲಿ ಮೂವರು ಭಾರತೀಯರು ಸೇರಿದಂತೆ ನಾಲ್ವರು ಮೃತಪಟ್ಟಿದ್ದಾರೆ.

ಮೃತರನ್ನು ತೆಲಂಗಾಣದ ನಲ್ಗೊಂಡ ಜಿಲ್ಲೆಯ ಸಾತ್ವಿಕ್‌ ನಾಯ್ಕ್(16), ಸುಹಾನ್‌ ನಾಯ್ಕ್‌ (15), ಜಯ ಸುಚಿತ್(14) ಎಂದು ಗುರುತಿಸಲಾಗಿದೆ.

ಈ ಮೂವರು ಒಂದೇ ಕುಟುಂಬದವರು. ಇವರ ತಂದೆಪಾಸ್ಟರ್‌ ಶ್ರೀನಿವಾಸ್‌ ನಾಯ್ಕ್‌ ಅಮೆರಿಕದಲ್ಲಿ ಉದ್ಯೋಗದಲ್ಲಿದ್ದರು. ಕೆಲ ದಿನಗಳ ಹಿಂದೆ ತೆಲಂಗಾಣಕ್ಕೆ ಬಂದು ನೆಲೆಸಿದ್ದರು. ಮಕ್ಕಳು ಅಮೆರಿಕದಲ್ಲಿಯೇ ಓದುತ್ತಿದ್ದರು.

ADVERTISEMENT

ಭಾನುವಾರ ರಾತ್ರಿ 11 ಗಂಟೆಗೆ ಅಗ್ನಿ ಆಕಸ್ಮಿಕ ಸಂಭವಿಸಿದೆ. ಘಟನೆಯಲ್ಲಿ ಅಮೆರಿಕದ ಕರಿ ಕೌಡ್ರಿಯೆಟ್ (46) ಮೃತರಾಗಿದ್ದು, ಏಳು ಮಂದಿ ಗಾಯಗೊಂಡಿದ್ದಾರೆ.ಕ್ರಿಸ್‌ಮಸ್‌ ಸಂಭ್ರಮಾಚರಣೆಯ ಸಲುವಾಗಿಕರಿ ಕೌಡ್ರಿಯೆಟ್ ಅವರ ನಿವಾಸಕ್ಕೆ ಮಕ್ಕಳು ತೆರಳಿದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.