ADVERTISEMENT

ಮಂಗಳೂರು-ತಿರುವನಂತಪುರ ಮಲಬಾರ್ ಎಕ್ಸ್‌ಪ್ರೆಸ್ ರೈಲಿನಲ್ಲಿ ಬೆಂಕಿ ಆಕಸ್ಮಿಕ

ಪಿಟಿಐ
Published 17 ಜನವರಿ 2021, 5:19 IST
Last Updated 17 ಜನವರಿ 2021, 5:19 IST
ಸಾಂದರ್ಭಿಕ ಚಿತ್ರ
ಸಾಂದರ್ಭಿಕ ಚಿತ್ರ   

ತಿರುವನಂತಪುರ: ಮಂಗಳೂರಿನಿಂದ ತಿರುವನಂತಪುರಕ್ಕೆ ತೆರಳಿದ ಮಲಬಾರ್ ಎಕ್ಸ್‌ಪ್ರೆಸ್ ರೈಲಿನಲ್ಲಿ ಭಾನುವಾರ ಬೆಂಕಿ ಆಕಸ್ಮಿಕ ಸಂಭವಿಸಿದೆ ಎಂದು ರೈಲ್ವೆ ಮೂಲಗಳಿಂದ ತಿಳಿದು ಬಂದಿರುವುದಾಗಿ ವರದಿಯಾಗಿದೆ.

ಮಂಗಳೂರು-ತಿರುವನಂತಪುರ ಮಲಬಾರ್ ಎಕ್ಸ್‌ಪ್ರೆಸ್ ರೈಲಿನ ಪಾರ್ಸೆಲ್ ವ್ಯಾನ್‌ನಲ್ಲಿ ಭಾನುವಾರ ಬೆಂಕಿ ಕಾಣಿಸಿಕೊಂಡಿದೆ. ಕೇರಳ ರಾಜಧಾನಿ ತಿರುವನಂತಪುರ ತಲುಪಲು 40 ಕೀ.ಮೀ.ಗಳಷ್ಟೇ ದೂರದಲ್ಲಿರುವಾಗ ಅವಘಡ ಸಂಭವಿಸಿದೆ.

ಘಟನೆಯಲ್ಲಿ ಯಾರಿಗೂ ಗಾಯಗಳಾಗಿಲ್ಲ. ರೈಲಿನಲ್ಲಿದ್ದ ಎಲ್ಲ ಪ್ರಯಾಣಿಕರನ್ನು ಸುರಕ್ಷಿತವಾಗಿ ಕೆಳಗಿಳಿಸಲಾಯಿತು. ಬಳಿಕ ಸ್ಥಳಕ್ಕೆ ತಲುಪಿದ ಅಗ್ನಿಶಾಮಕ ಸಿಬ್ಬಂದಿಗಳು ಬೆಂಕಿಯನ್ನು ನಂದಿಸಿದ್ದಾರೆ.

ADVERTISEMENT

ಪ್ರಾಥಮಿಕ ಮಾಹಿತಿಯ ಪ್ರಕಾರ, ವರ್ಕಲ ಹಾಗೂ ಪರವೂರ್ ನಿಲ್ದಾಣಗಳ ನಡುವಣ ಎಡವದಲ್ಲಿ ಬೆಳಗ್ಗೆ 7.40ರ ಸುಮಾರಿಗೆ ರೈಲಿನ ಮುಂಭಾಗದಲ್ಲಿರುವ ಪಾರ್ಸೆಲ್ ವ್ಯಾನ್‌ನಲ್ಲಿ ಹೊಗೆಯನ್ನು ಗಮನಿಸಿದ ಲೊಕೊ ಪೈಲಟ್ ತಕ್ಷಣ ರೈಲ್ವೆ ಅಧಿಕಾರಿಗಳ ಗಮನಕ್ಕೆ ತಂದಿದ್ದಾರೆ.

ಪಾರ್ಸೆಲ್ ವ್ಯಾನ್‌ನಿಂದ ಬೆಂಕಿ ಇತರೆಡೆಗೆ ಹರಡದಂತೆ ತಡೆಯುವಲ್ಲಿ ಅಗ್ನಿಶಾಮಕ ದಳದ ಸಿಬ್ಬಂದಿಗಳು ಯಶಸ್ವಿಯಾಗಿದ್ದಾರೆ. ಬೆಂಕಿ ಹೊತ್ತಿಕೊಂಡಿರುವ ಘಟನೆಯ ಹಿಂದಿನ ನಿಖರ ಕಾರಣಗಳು ತಿಳಿದುಬಂದಿಲ್ಲ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.