ADVERTISEMENT

ಮುಖ್ಯಕಾರ್ಯದರ್ಶಿ ಮೇಲೆ ಹಲ್ಲೆ ಆರೋಪ: ಕೇಜ್ರಿವಾಲ್‌ ವಿರುದ್ಧ ಬಿಜೆಪಿ ನಾಯಕಿ ಕಿಡಿ

ಪ್ರಜಾವಾಣಿ ವೆಬ್‌ ಡೆಸ್ಕ್‌ 
Published 12 ಆಗಸ್ಟ್ 2021, 4:27 IST
Last Updated 12 ಆಗಸ್ಟ್ 2021, 4:27 IST
ದೆಹಲಿ ಮುಖ್ಯಮಂತ್ರಿ ಅರವಿಂದ ಕೇಜ್ರಿವಾಲ್‌
ದೆಹಲಿ ಮುಖ್ಯಮಂತ್ರಿ ಅರವಿಂದ ಕೇಜ್ರಿವಾಲ್‌   

ನವದೆಹಲಿ: ಸರ್ಕಾರದ ಮುಖ್ಯಕಾರ್ಯದರ್ಶಿ ಮೇಲೆ ಹಲ್ಲೆ ನಡೆಸಿದ ಅರೋಪ ಪ್ರಕರಣಕ್ಕೆ ಸಂಬಂಧಿಸಿದಂತೆದೆಹಲಿ ಮುಖ್ಯಮಂತ್ರಿ ಅರವಿಂದ ಕೇಜ್ರಿವಾಲ್‌ ಹಾಗೂ ಉಪಮುಖ್ಯಮಂತ್ರಿ ಮನೀಶ್‌ ಸಿಸೋಡಿಯಾವಿರುದ್ಧ ಬಿಜೆಪಿ ವಕ್ತಾರೆ ಶಾಜಿಯಾ ಇಲ್ಮಿ ಕಿಡಿ ಕಾರಿದ್ದಾರೆ. ಈ ರೀತಿಯ ಪ್ರಕರಣ ನಡೆದಿರುವುದು ದೇಶದ ಇತಿಹಾಸದಲ್ಲಿ ಇದೇ ಮೊದಲು ಎಂದುಆಕ್ರೋಶ ವ್ಯಕ್ತಪಡಿಸಿದ್ದಾರೆ.

2018ರಲ್ಲಿ ದೆಹಲಿಯ ಅಂದಿನ ಮುಖ್ಯ ಕಾರ್ಯದರ್ಶಿ ಅಂಶು ಪ್ರಕಾಶ್ ಮೇಲೆ ಹಲ್ಲೆ ಆರೋಪ ಪ್ರಕರಣಕ್ಕೆ ಸಂಬಂಧಿಸಿದಂತೆ ಮುಖ್ಯಮಂತ್ರಿ ಕೇಜ್ರಿವಾಲ್, ಉಪಮುಖ್ಯಮಂತ್ರಿ ಸಿಸೋಡಿಯಾ ಮತ್ತು9 ಶಾಸಕರನ್ನು ದೆಹಲಿ ಕೋರ್ಟ್ ಬುಧವಾರ ಆರೋಪ ಮುಕ್ತಗೊಳಿಸಿದೆ.ಆದರೆ, ಎಎಪಿ ಶಾಸಕರಾದ ಅಮಾನತುಲ್ಲಾ ಖಾನ್ ಮತ್ತು ಪ್ರಕಾಶ್ ಜರ್ವಾಲ್ ವಿರುದ್ಧ ಆರೋಪಪಟ್ಟಿ ಸಲ್ಲಿಸಲು ನ್ಯಾಯಾಲಯ ಆದೇಶಿಸಿದೆ.

ನ್ಯಾಯಾಲಯದ ಆದೇಶದ ಬಳಿಕಪ್ರತಿಕ್ರಿಯಿಸಿದ್ದ ಸಿಸೋಡಿಯಾ, ಇದುನ್ಯಾಯ ಮತ್ತು ಸತ್ಯದ ವಿಜಯದ ದಿನ ಎಂದು ಬಣ್ಣಿಸಿದ್ದರು.

ADVERTISEMENT

ಪ್ರಕರಣ ಸಂಬಂಧ ಮಾಧ್ಯಮದವರೊಂದಿಗೆ ಮಾತನಾಡಿರುವ ಇಲ್ಮಿ,ʼಮುಖ್ಯಮಂತ್ರಿ‌ಯವರ ಆಹ್ವಾನದ ಮೇರೆಗೆ‌ ಆಗಮಿಸಿದ್ದ ಸರ್ಕಾರದಮುಖ್ಯಕಾರ್ಯದರ್ಶಿಮೇಲೆ 11 ಶಾಸಕರು ಮತ್ತು ಉಪಮುಖ್ಯಮಂತ್ರಿ ಅವರ ಸಮ್ಮುಖದಲ್ಲಿ ಕನ್ನಡಕ ಒಡೆದುಹೋಗುವಂತೆ ಹಲ್ಲೆ ನಡೆಸಿರುವುದು ದೇಶದ ಇತಿಹಾಸದಲ್ಲೇ ಮೊದಲ ಪ್ರಕರಣʼ ಎಂದುವಾಗ್ದಾಳಿ ನಡೆಸಿದ್ದಾರೆ.

ಮುಂದುವರಿದು, ʼಇದು ಉದ್ದೇಶಪೂರ್ವಕ ಪಿತೂರಿ, ಬೆದರಿಕೆಯೆಂಬುದು ಸುಳ್ಳಲ್ಲʼ ಎಂದು ಹೇಳಿದ್ದಾರೆ.

ʼಇಬ್ಬರು ಶಾಸಕರು ಮುಖ್ಯಕಾರ್ಯದರ್ಶಿ ಅವರ ಮೇಲೆ ಹಲ್ಲೆ ನಡೆಸುತ್ತಿದ್ದಾಗ ಮುಖ್ಯಮಂತ್ರಿ ಮತ್ತು ಉಪಮುಖ್ಯಮಂತ್ರಿ ಏನು ಮಾಡುತ್ತಿದ್ದರು? ಅವರನ್ನು (ಮುಖ್ಯಕಾರ್ಯದರ್ಶಿಯನ್ನು) ಆಹ್ವಾನಿಸಿದ್ದು ಏಕೆ?ಎಂದೂ ಪ್ರಶ್ನಿಸಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.