ADVERTISEMENT

‘ಇಂಡಿಯಾ ಗೇಟ್‌: ಭದ್ರತಾ ಸಿಬ್ಬಂದಿ ಮೇಲೆ ಆಹಾರ ಮಾರಾಟಗಾರರ ಹಲ್ಲೆ’

ಪಿಟಿಐ
Published 4 ಜನವರಿ 2023, 15:40 IST
Last Updated 4 ಜನವರಿ 2023, 15:40 IST

ನವದೆಹಲಿ (ಪಿಟಿಐ): ಇಂಡಿಯಾ ಗೇಟ್‌ ಬಳಿ ಆಹಾರ ಮಾರಾಟ ನಿರ್ಬಂಧದ ವಿಚಾರವಾಗಿ ಖಾಸಗಿ ಭದ್ರತಾ ಸಿಬ್ಬಂದಿ ಹಾಗೂ ಆಹಾರ ಮಾರಾಟಗಾರರ ಮಧ್ಯೆ ಹೊಡೆದಾಟ ನಡೆದಿದ್ದು, ಐವರು ಭದ್ರತಾ ಸಿಬ್ಬಂದಿ ಗಾಯಗೊಂಡಿದ್ದಾರೆ.

ಶಹಜಹಾನ್‌ ರಸ್ತೆಯಲ್ಲಿರುವ ಚಿಲ್ಡ್ರನ್‌ ಪಾರ್ಕ್‌ನಲ್ಲಿ ಮಂಗಳವಾರ ಮಧ್ಯಾಹ್ನದ ವೇಳೆಗೆ ಈ ಘಟನೆ ನಡೆದಿದೆ ಎಂದು ಪೊಲೀಸರು ಬುಧವಾರ ಮಾಹಿತಿ ನೀಡಿದರು.

‘ಇಂಡಿಯಾ ಗೇಟ್‌ ಪ್ರದೇಶದಲ್ಲಿ ಆಹಾರ ಮಾರಾಟಕ್ಕೆ ನಿರ್ಬಂಧವಿದೆ. ಆದ್ದರಿಂದ ಆಹಾರ ಮಾರಾಟ ಮಾಡದಂತೆ ಆಹಾರ ಮಾರಾಟಗಾರರಿಗೆ ತಿಳಿಸಲಾಯಿತು. ಮಧ್ಯಾ‌ಹ್ನ ಸುಮಾರು 3.30ರ ವೇಳೆಗೆ ಅಂಗಡಿಗಳ ಸಾಮಾನುಗಳನ್ನು ಟ್ರಕ್‌ನಲ್ಲಿ ತುಂಬಿಕೊಳ್ಳಲು ಮುಂದಾದಾಗ ಸಿಟ್ಟಿಗೆದ್ದ ಆಹಾರ ಮಾರಾಟಗಾರರು ಭದ್ರತಾ ಸಿಬ್ಬಂದ ಮೇಲೆ ಕಲ್ಲು ತೂರಾಟ ನಡೆಸಿದರು. ಕೋಲುಗಳಿಂದ ಹಲ್ಲೆಗೆ ಮಾಡಿದರು’ ಎಂದು ಉಪ ಪೊಲೀಸ್‌ ಆಯುಕ್ತ (ನವದೆಹಲಿ) ಪ್ರಣವ್‌ ತಾಯಲ್‌ ವಿವರಿಸಿದರು.

ADVERTISEMENT

‘ಮಾರಾಟಗಾರರ ಮೇಲೆ ಪ್ರಕರಣ ದಾಖಲಿಸಲಾಗಿದೆ. ತನಿಖೆ ಪ್ರಗತಿಯಲ್ಲಿದೆ’ ಎಂದರು.

ಭದ್ರತಾ ಸಿಬ್ಬಂದಿ ಹಾಗೂ ಮಾರಾಟಗಾರರ ಮಧ್ಯ ನಡೆದ ಹೊಡೆದಾಟದ ವಿಡಿಯೊ ಸಾಮಾಜಿಕ ಜಾಲತಾಣಗಳಲ್ಲಿ ಹರಿದಾಡುತ್ತಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.