ADVERTISEMENT

ಪಂಚ ಪರಿವರ್ತನೆ: ರಾಜಕೀಯ ಕಾರ್ಯಕ್ರಮವಲ್ಲ; ಆರ್‌ಎಸ್ಎಸ್‌

ಪಿಟಿಐ
Published 29 ಅಕ್ಟೋಬರ್ 2024, 16:28 IST
Last Updated 29 ಅಕ್ಟೋಬರ್ 2024, 16:28 IST
   

ನವದೆಹಲಿ: ಸಮಾಜ ಪರಿವರ್ತನೆಗೆ ಆರ್‌ಎಸ್‌ಎಸ್  ಪ್ರಸ್ತಾಪಿಸಿರುವ ‘ಪಂಚ ಪರಿವರ್ತನೆ’ ಕಾರ್ಯಕ್ರಮ ರಾಜಕೀಯ ಕಾರ್ಯಕ್ರಮವಲ್ಲ. ದೇಶವನ್ನು ಪ್ರಗತಿ ಪಥದಲ್ಲಿ ಮುನ್ನಡೆಸುವ ಗುರಿ ಹೊಂದಿದೆ’ ಎಂದು ಆರ್‌ಎಸ್‌ಎಸ್‌ ಮುಖಂಡ ಸುನಿಲ್‌ ಅಂಬೇಕರ್ ಮಂಗಳವಾರ ತಿಳಿಸಿದ್ದಾರೆ. 

ಪಂಚ ಪರಿವರ್ತನೆ ಪಕ್ಷದ ಅತ್ಯುನ್ನತ ಅಜೆಂಡಾ. ಇದನ್ನು ಕಾರ್ಯಕರ್ತರೇ ಸಮಾಜದಲ್ಲಿ ದೊಡ್ಡ ಪ್ರಮಾಣದಲ್ಲಿ ಅಭಿಯಾನ ನಡೆಸುವ ಮೂಲಕ ಮುನ್ನಡೆಸುವರು ಎಂದು ತಿಳಿಸಿದ್ದಾರೆ. 

‘ಪಂಚ ಪರಿವರ್ತನೆ ಕುರಿತು ಸಂಘ ನಿರಂತರವಾಗಿ ಮಾತನಾಡುತ್ತಿದೆ ಎಂಬುದನ್ನು ನೀವು ಗಮನಿಸಿರಬೇಕು. ಇದು ರಾಜಕೀಯ ಕಾರ್ಯಕ್ರಮವಲ್ಲ ಎಂದಷ್ಟೇ ಹೇಳಲು ಬಯಸುತ್ತೇನೆ’ ಎಂದರು.

ADVERTISEMENT

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.