ADVERTISEMENT

ಜ.8ರಿಂದ ಭಾರತ-ಬ್ರಿಟನ್ ವಿಮಾನಯಾನ ಪುನರಾರಂಭ: ಕೇಂದ್ರ

ಏಜೆನ್ಸೀಸ್
Published 1 ಜನವರಿ 2021, 15:13 IST
Last Updated 1 ಜನವರಿ 2021, 15:13 IST
ಸಾಂದರ್ಭಿಕ ಚಿತ್ರ
ಸಾಂದರ್ಭಿಕ ಚಿತ್ರ   

ನವದೆಹಲಿ: ಕೊರೊನಾ ವೈರಾಣುವಿನ ಹೊಸ ಸ್ವರೂಪವು ಬ್ರಿಟನ್‌ನಲ್ಲಿ ಪತ್ತೆಯಾದ ಬೆನ್ನಲ್ಲೇ ತಾತ್ಕಾಲಿಕವಾಗಿ ಸ್ಥಗಿತಗೊಂಡಿರುವ ಭಾರತ ಹಾಗೂ ಬ್ರಿಟನ್ ನಡುವಣ ವಿಮಾನಯಾನ ಸೇವೆಯನ್ನು ಜನವರಿ 8ರಿಂದ ಪುನರಾರಂಭಿಸಲಾಗುತ್ತಿದೆ. ಈ ಕುರಿತು ಕೇಂದ್ರ ನಾಗರಿಕ ವಿಮಾನಯಾನ ಸಚಿವ ಹರ್ದೀಪ್ ಸಿಂಗ್ ಪುರಿ ಸೋಮವಾರ ಮಾಹಿತಿ ನೀಡಿದ್ದಾರೆ.

ಟ್ವೀಟ್ ಮಾಡಿರುವ ಸಚಿವರು, ಭಾರತ ಹಾಗೂ ಬ್ರಿಟನ್ ವಿಮಾನಯಾನ ಮೇಲಿನ ತಾತ್ಕಾಲಿಕ ನಿಷೇಧವನ್ನು ತೆರವುಗೊಳಿಸಲು ನಿರ್ಧರಿಸಲಾಗಿದ್ದು, ಜನವರಿ 8ರಿಂದ ಸೀಮಿತ ರೀತಿಯಲ್ಲಿ ಕಾರ್ಯಾಚರಣೆ ಪುನಾರಂಭಿಸುವುದಾಗಿ ತಿಳಿಸಿದ್ದಾರೆ.

ಜನವರಿ 23ರ ವರೆಗೆ ಕಾರ್ಯಾಚರಣೆಯನ್ನು ವಾರಕ್ಕೆ 15 ವಿಮಾನಯಾನಗಳಿಗೆ ಮಾತ್ರ ಸೀಮಿತಗೊಳಿಸಲಾಗುತ್ತದೆ ಎಂದಿದ್ದಾರೆ.

ನಿಷೇಧ ತೆರುವುಗೊಳಿಸುವುದರ ಭಾಗವಾಗಿ ರಾಷ್ಟ್ರ ರಾಜಧಾನಿ ನವದೆಹಲಿ, ಮುಂಬೈ, ಬೆಂಗಳೂರು ಹಾಗೂ ಹೈದರಾಬಾದ್ ನಗರಗಳಿಂದ ಬ್ರಿಟನ್‌ಗೆ ವಿಮಾನಗಳು ಪ್ರಯಾಣ ಬೆಳೆಸಲಿವೆ.

ಕೊರೊನಾ ವೈರಾಣುವಿನ ಹೊಸ ಸ್ವರೂಪವು ಪತ್ತೆಯಾದ ಬೆನ್ನಲ್ಲೇ ಡಿಸೆಂಬರ್ 23ರಿಂದ ಬ್ರಿಟನ್‌ಗೆ ಹೋಗುವ ಹಾಗೂ ಬರುವ ಎಲ್ಲ ವಿಮಾನಗಳ ಸಂಚಾರವನ್ನು ರದ್ದುಗೊಳಿಸಲಾಗಿತ್ತು. ಬಳಿಕ ತಾತ್ಕಾಲಿಕ ನಿಷೇಧವನ್ನು ಜನವರಿ 7ರ ವರೆಗೆ ವಿಸ್ತರಿಸಲಾಗಿತ್ತು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.