ADVERTISEMENT

ಹೊಸ ಕಾಯ್ದೆ: ವಿದೇಶಿ ವಿದ್ಯಾರ್ಥಿಗಳ ಮಾಹಿತಿ ‌ನೀಡಲು ಸೂಚನೆ

ವಲಸೆ ಮತ್ತು ವಿದೇಶಿಯರ ನಿಯಮಗಳು– 2025ರ ನಿಯಮಗಳು

​ಪ್ರಜಾವಾಣಿ ವಾರ್ತೆ
Published 4 ಸೆಪ್ಟೆಂಬರ್ 2025, 0:21 IST
Last Updated 4 ಸೆಪ್ಟೆಂಬರ್ 2025, 0:21 IST
<div class="paragraphs"><p>ಪ್ರಾತಿನಿಧಿಕ ಚಿತ್ರ</p></div>

ಪ್ರಾತಿನಿಧಿಕ ಚಿತ್ರ

   

ನವದೆಹಲಿ: ಶಿಕ್ಷಣ ಸಂಸ್ಥೆಗಳು ವಿದೇಶಿ ವಿದ್ಯಾರ್ಥಿ‌ಗ‌ಳ ಹಾಗೂ ಸಾಗರೋತ್ತರ ಭಾರತೀಯ ನಾಗರಿಕ ಕಾರ್ಡ್‌ದಾರರ (ಒಸಿಐ) ಶೈಕ್ಷಣಿಕ ಸಾಧನೆಯ ವಿವರಗಳನ್ನು ಪ್ರತಿ ಸೆಮಿಸ್ಟರ್‌ಗೊಮ್ಮೆ ‌ಒದಗಿಸಬೇಕು. ವರ್ಷಕ್ಕೆ ಎರಡು ಬಾರಿ ಹಾಜರಾತಿ ದಾಖಲೆಗಳನ್ನು ನೀಡಬೇಕು ಎಂದು ‘ವಲಸೆ ಮತ್ತು ವಿದೇಶಿಯರ ನಿಯಮಗಳು–2025’ ಕಾಯ್ದೆಯಲ್ಲಿ ತಿಳಿಸಲಾಗಿದೆ.  

ಸೋಮವಾರ ಹೊರಡಿಸಿದ ಅಧಿಸೂಚನೆಯ ಪ್ರಕಾರ, ವಿದೇಶಿ ವಿದ್ಯಾರ್ಥಿಗಳನ್ನು ದಾಖಲು ಮಾಡಿಕೊಳ್ಳುವ ಪ್ರತಿ ಶಿಕ್ಷಣ ಸಂಸ್ಥೆಯು ಪ್ರವೇಶದ 24 ಗಂಟೆಯೊಳಗಾಗಿ ನಮೂನೆ–2 ಅನ್ನು ಸಲ್ಲಿಸಬೇಕು. ಗೊತ್ತುಪಡಿಸಿದ ಪೋರ್ಟಲ್‌ ಅಥವಾ ‘ಇಂಡಿಯನ್‌ ವೀಸಾ ಸು–ಸ್ವಾ‌ಗತಂ’ನಲ್ಲಿ ಮೊಬೈಲ್‌ ಅಪ್ಲಿಕೇಶನ್‌ನಲ್ಲಿ ನಮೂನೆಗಳನ್ನು ಸಲ್ಲಿಸಬೇಕು. 

ADVERTISEMENT

ಆಯಾ ಸಂಸ್ಥೆಯು, ವಿದೇಶಿ ವಿದ್ಯಾರ್ಥಿಗಳಿಗೆ ಹಾಸ್ಟಲ್‌ ಸೌಲಭ್ಯವನ್ನು ಒದಗಿಸುತ್ತಿದ್ದರೆ, ವಸತಿ ಕುರಿತು ಪ್ರತ್ಯೇಕ ನಮೂನೆ–3ಅನ್ನು ಸಲ್ಲಿಸಬೇಕು. 

ಕಾಯ್ದೆಯ ಪ್ರಮುಖ ಅಂಶಗಳು

  • ಪ್ರತಿಯೊಂದು ಶಿಕ್ಷಣ ಸಂಸ್ಥೆ ಹಾಗೂ ವಿಶ್ವವಿದ್ಯಾಲ‌ಯವು ತಾನು ದಾಖಲು ಮಾಡಿಕೊಳ್ಳುವ ವಿದೇಶಿ ವಿದ್ಯಾರ್ಥಿಯ ಕೋರ್ಸ್‌ ಅದರ ಮಾದರಿ ಅವಧಿ ಶುಲ್ಕ ಸೇರಿದಂತೆ ಎಲ್ಲಾ ದಾಖಲೆಗಳನ್ನು ನೋಂದಣಿ ಅಧಿಕಾರಿಗಳಿಗೆ ಒದಗಿಸಬೇಕು

  • ವಿದ್ಯಾರ್ಥಿಯ ನಡವಳಿಕೆಯು ಉತ್ತಮವಾಗಿದೆಯೇ ಇಲ್ಲವೇ ತರಗತಿಗೆ ಸರಿಯಾಗಿ ಹಾಜರಾಗುತ್ತಿದ್ದಾನೆಯೇ? ಪರೀಕ್ಷೆಗಳಲ್ಲಿ ಉತ್ತೀರ್ಣನಾಗುತ್ತಿದ್ದಾನೆಯೇ? ಕೋರ್ಸ್‌ ಅನ್ನು ಮುಂದುವರಿಸಲು ಅರ್ಹನಾಗಿದ್ದಾನೆಯೇ ಎಂಬ ಮಾಹಿತಿ ನೀಡಬೇಕು 

  • ಆಸ್ಪತ್ರೆ ನರ್ಸಿಂಗ್‌ ಹೋಮ್‌ ಅಥವಾ ಯಾವುದೇ ವೈದ್ಯಕೀಯ ಸಂಸ್ಥೆಯು ತನ್ನ ಆವರಣದಲ್ಲಿ ವಿದೇಶಿ ರೋಗಿಗಳಿಗೆ ಮತ್ತು ಅವರ ಸಹಾಯಕರಿಗೆ ವೈದ್ಯಕೀ‌ಯ ಮತ್ತು ವಸತಿ ಸೌಲಭ್ಯ ನೀಡಿದರೆ ಈ ಬಗ್ಗೆ 24 ಗಂಟೆಯೊಳಗೆ ಮಾಹಿತಿ ನೀಡಬೇಕು. ಆಸ್ಪತ್ರೆಯಿಂದ ಬಿಡುಗಡೆಯಾದ ಬಳಿಕ ಅವರು ಯಾವ ವಿ‌ಳಾಸಕ್ಕೆ ತೆರಳುತ್ತಾರೆ ಎಂಬುದನ್ನೂ ತಿಳಿಸಬೇಕು

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.