ADVERTISEMENT

ಪರಮಾಣು ಶಕ್ತಿ ಆಯೋಗದ ಮಾಜಿ ಅಧ್ಯಕ್ಷ ಶ್ರೀಕುಮಾರ್ ಬ್ಯಾನರ್ಜಿ ನಿಧನ

ಪಿಟಿಐ
Published 23 ಮೇ 2021, 12:55 IST
Last Updated 23 ಮೇ 2021, 12:55 IST
ಡಾ. ಶ್ರೀಕುಮಾರ್ ಬ್ಯಾನರ್ಜಿ
ಡಾ. ಶ್ರೀಕುಮಾರ್ ಬ್ಯಾನರ್ಜಿ   

ಮುಂಬೈ: ಪರಮಾಣು ಶಕ್ತಿ ಆಯೋಗದ ಮಾಜಿ ಅಧ್ಯಕ್ಷ ಶ್ರೀಕುಮಾರ್ ಬ್ಯಾನರ್ಜಿ (70) ಅವರು ನವಿ ಮುಂಬೈನ ಸ್ವಗೃಹದಲ್ಲಿ ಭಾನುವಾರ ಹೃದಯಾಘಾತದಿಂದ ನಿಧನ ಹೊಂದಿದರು.

ಬ್ಯಾನರ್ಜಿ ಅವರು ಕಳೆದ ತಿಂಗಳಷ್ಟೇ ಕೋವಿಡ್‌–19ನಿಂದ ಗುಣಮುಖರಾಗಿದ್ದರು. 2012ರಲ್ಲಿ ಅವರು ಪರಮಾಣು ಶಕ್ತಿ ಆಯೋಗದ ಅಧ್ಯಕ್ಷ ಸ್ಥಾನ ಹಾಗೂ ಪರಮಾಣು ಶಕ್ತಿ ಇಲಾಖೆಯ ಕಾರ್ಯದರ್ಶಿ ಹುದ್ದೆಯಿಂದ ನಿವೃತ್ತಿ ಹೊಂದಿದ್ದರು.

2010ರ ತನಕ ಒಟ್ಟು ಆರು ವರ್ಷಗಳ ಕಾಲ ಬ್ಯಾನರ್ಜಿ ಅವರು ಭಾಭಾ ಪರಮಾಣು ಸಂಶೋಧನಾ ಕೇಂದ್ರದ ನಿರ್ದೇಶಕರಾಗಿಯೂ ಸೇವೆ ಸಲ್ಲಿಸಿದ್ದರು.

ADVERTISEMENT

ಕಾನ್ಪುರದ ಐಐಟಿಯಿಂದ ಮೆಟಲರ್ಜಿ ಎಂಜಿನಿಯರ್ ಪದವಿ ಪಡೆದಿದ್ದ ಬ್ಯಾನರ್ಜಿ ಅವರು, ಬಿ.ಟೆಕ್ ಮುಗಿದ ಬಳಿಕ ಭಾಭಾ ಪರಮಾಣು ಸಂಶೋಧನಾ ಕೇಂದ್ರದ ಕೆಲಸಕ್ಕೆ ಸೇರಿದ್ದರು. ನಂತರ ಆ ಕೇಂದ್ರದ ನಿರ್ದೇಶಕರೂ ಆಗಿದ್ದರು. ಫಿಜಿಕಲ್ ಮೆಟಲರ್ಜಿ ಹಾಗೂ ಮಟಿರೀಯಲ್ ಸೈನ್ಸ್ ಇವು ಬ್ಯಾನರ್ಜಿ ಅವರ ಆಸಕ್ತಿಯ ಕ್ಷೇತ್ರಗಳಾಗಿದ್ದವು.

ತಮ್ಮ ವೃತ್ತಿ ಜೀವನದುದ್ದಕ್ಕೂ ಹಲವು ಪ್ರಶಸ್ತಿಗಳಿಗೆ ಭಾಜರಾಗಿದ್ದ ಬ್ಯಾನರ್ಜಿ ಅವರಿಗೆ 2005ರಲ್ಲಿ ‘ಪದ್ಮಶ್ರೀ’ ಪುರಸ್ಕಾರ ಹಾಗೂ 1989ರಲ್ಲಿ ಶಾಂತಿ ಸ್ವರೂಪ್ ಭಟ್ನಾಗರ್ ಪ್ರಶಸ್ತಿ ದೊರೆತಿತ್ತು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.