ಒಟ್ಟಾವ: ಕೆನಡಾದ ಲಿಬರಲ್ ಪಾರ್ಟಿ ಹೊಸ ನಾಯಕನಾಗಿ ಮಾರ್ಕ್ ಕಾರ್ನೆ ಆಯ್ಕೆಯಾಗುವ ಸಾಧ್ಯತೆ ಇದೆ. ಆಯ್ಕೆಯಾದಲ್ಲಿ ಇವರು ಪ್ರಧಾನಿ ಜಸ್ಟಿನ್ ಟ್ರುಡೊ ಅವರ ಬದಲಿಗೆ ಪ್ರಧಾನಿಯಾಗಿ ಅಧಿಕಾರ ಸ್ವೀಕರಿಸಲಿದ್ದಾರೆ.
ಮಾರ್ಕ್ ಕಾರ್ನೆ ಅವರು ಬ್ಯಾಂಕ್ ಆಫ್ ಕೆನಡಾ ಹಾಗೂ ಬ್ಯಾಂಕ್ ಆಫ್ ಇಂಗ್ಲೆಂಡ್‌ನ ಗವರ್ನರ್ ಆಗಿ ಕಾರ್ಯನಿರ್ವಹಿಸಿದ್ದು, ರಾಜಕೀಯವಾಗಿ ಅನನುಭವಿ ಆಗಿದ್ದಾರೆ.
ಹೊಸ ನಾಯಕನ ಆಯ್ಕೆಗೆ ನಡೆದ ಚುನಾವಣೆಯಲ್ಲಿ ಪಕ್ಷದ ಸುಮಾರು 4 ಲಕ್ಷ ಸದಸ್ಯರು ಮತದಾನ ಮಾಡಿದ್ದಾರೆ.
ಜತೆಗೆ ಮಾಜಿ ಉಪ ಪ್ರಧಾನಿ ಕ್ರಿಸ್ಟಿಯಾ ಫ್ರೀಲ್ಯಾಂಡ್ ಕೂಡಾ ಸ್ಪರ್ಧೆಯಲ್ಲಿದ್ದಾರೆ. ಇವರು, 2015ರಲ್ಲಿ ಲಿಬರಲ್ ಪಾರ್ಟಿ ಸರ್ಕಾರವಿದ್ದಾಗ ವಿವಿಧ ಪ್ರಮುಖ ಸ್ಥಾನ ನಿಭಾಯಿಸಿದ್ದರು.
ಚುನಾವಣೆಯಲ್ಲಿ ಗೆಲ್ಲುವವರು ಟ್ರುಡೊ ಅವರ ಸ್ಥಾನದಲ್ಲಿ ಪ್ರಧಾನಿ ಆಗಿ ಅಧಿಕಾರ ಸ್ವೀಕರಿಸಲಿದ್ದು, ನಂತರ ಸಾರ್ವತ್ರಿಕ ಚುನಾವಣೆಯಲ್ಲಿ ಪಕ್ಷ ಮುನ್ನಡೆಸುವರು. ಪರಿಣತರ ಪ್ರಕಾರ, ಪ್ರಸ್ತುತ ಪ್ರತಿಪಕ್ಷ ಕನ್ಸರ್ವೇಟಿವ್ ಪಾರ್ಟಿ ಪರವಾಗಿ ಒಲವು ಹೆಚ್ಚಾಗಿದೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.