ADVERTISEMENT

ಟಿಎಂಸಿ ಪಕ್ಷಕ್ಕೆ ಸೇರ್ಪಡೆಯಾದ ಗೋವಾದ ಮಾಜಿ ಸಿಎಂ ಲುಯಿಜಿನೊ ಫೆಲೆರೊ

ಪಿಟಿಐ
Published 29 ಸೆಪ್ಟೆಂಬರ್ 2021, 12:32 IST
Last Updated 29 ಸೆಪ್ಟೆಂಬರ್ 2021, 12:32 IST
ಲುಯಿಜಿನೊ ಫೆಲೆರೊ ಟ್ವಿಟರ್ ಖಾತೆಯ ಚಿತ್ರ
ಲುಯಿಜಿನೊ ಫೆಲೆರೊ ಟ್ವಿಟರ್ ಖಾತೆಯ ಚಿತ್ರ   

ಕೋ್ಲತ್ತ: ಕಾಂಗ್ರೆಸ್ ಪಕ್ಷ ತೊರೆದ ಎರಡು ದಿನಗಳ ಬಳಿಕ, ಗೋವಾದ ಮಾಜಿ ಮುಖ್ಯಮಂತ್ರಿ ಲುಯಿಜಿನೊ ಫೆಲೆರೊ ಬುಧವಾರ ತೃಣಮೂಲ ಕಾಂಗ್ರೆಸ್ ಸೇರಿದರು.

ಟಿಎಂಸಿ ಪಕ್ಷದ ಪ್ರಧಾನ ಕಾರ್ಯದರ್ಶಿ ಅಭಿಷೇಕ್ ಬ್ಯಾನರ್ಜಿ ಮತ್ತು ಇತರ ಹಿರಿಯ ನಾಯಕರಾದ ಸೌಗತ ರೇ ಮತ್ತು ಸುಬ್ರತಾ ಮುಖರ್ಜಿ ಅವರ ಸಮ್ಮುಖದಲ್ಲಿ ಪಕ್ಷಕ್ಕೆ ಸೇರಿದರು.

‘ನಾನು ಕಾಂಗ್ರೆಸ್ ಕ್ಷದಿಂದ ಹೊರಬಂದಿರಬಹುದು. ಆದರೆ, ಈಗಲೂ ನಾನು ನಾಯಕ ಎಂದು ಹೇಳಲೇಬೇಕು. ನಾನು ಅದೇ ಸಿದ್ಧಾಂತ ಮತ್ತು ತತ್ವಗಳನ್ನು ನಂಬಿದ್ದೇನೆ. ಇಂದು ನಾನು ಟಿಎಂಸಿಗೆ ಸೇರುವಾಗ, ನನ್ನ ಕನಸು ಈ ಕಾಂಗ್ರೆಸ್ ಕುಟುಂಬವನ್ನು ಒಟ್ಟುಗೂಡಿಸುವುದಾಗಿದೆ. ನನ್ನ ಪ್ರಮುಖ ಗುರಿ ಬಿಜೆಪಿಯನ್ನು ಸೋಲಿಸುವುದು’ಎಂದು ಫೆಲೆರೊ ಹೇಳಿದರು.

ADVERTISEMENT

ಇದಕ್ಕೂ ಮುನ್ನ, ಲುಯಿಜಿನೊ ಫೆಲೆರೊ ಮತ್ತು ಗೋವಾದ ಇತರ ಕೆಲವು ಕಾಂಗ್ರೆಸ್ ನಾಯಕರು, ಟಿಎಂಸಿ ವರಿಷ್ಠೆ ಮತ್ತು ಪಶ್ಚಿಮ ಬಂಗಾಳ ಮುಖ್ಯಮಂತ್ರಿ ಮಮತಾ ಬ್ಯಾನರ್ಜಿ ಅವರನ್ನು ಭೇಟಿಯಾಗಿದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.