ADVERTISEMENT

ಸಾರ್ವಜನಿಕ ಹುದ್ದೆಯಲ್ಲಿರದಂತೆ ಪಾಕ್ ಮಾಜಿ ಪಿಎಂ ಇಮ್ರಾನ್ ಖಾನ್‌ಗೆ 5 ವರ್ಷ ನಿಷೇಧ

ಪಿಟಿಐ
Published 21 ಅಕ್ಟೋಬರ್ 2022, 11:14 IST
Last Updated 21 ಅಕ್ಟೋಬರ್ 2022, 11:14 IST
ಪಾಕಿಸ್ತಾನ ಮಾಜಿ ಪ್ರಧಾನಿ ಇಮ್ರಾನ್‌ ಖಾನ್‌
ಪಾಕಿಸ್ತಾನ ಮಾಜಿ ಪ್ರಧಾನಿ ಇಮ್ರಾನ್‌ ಖಾನ್‌   

ಇಸ್ಲಾಮಾಬಾದ್: ಬೇರೆ ದೇಶಗಳ ನಾಯಕರಿಂದ ಸ್ವೀಕರಿಸಿದಉಡುಗೊರೆಗಳನ್ನು ಅಕ್ರಮವಾಗಿ ಮಾರಾಟ ಮಾಡಿದ ಪ್ರಕರಣಕ್ಕೆ ಸಂಬಂಧಿಸಿದಂತೆ ಮಾಜಿ ಪ್ರಧಾನಿ ಇಮ್ರಾನ್‌ ಖಾನ್‌ ವಿರುದ್ಧ ಪಾಕಿಸ್ತಾನ ಚುನಾವಣಾ ಆಯೋಗ ಶುಕ್ರವಾರ ಕ್ರಮ ಕೈಗೊಂಡಿದೆ.

ಸಂವಿಧಾನದ63(1)(3) ವಿಧಿ ಅಡಿಯಲ್ಲಿ ಕ್ರಮ ಕೈಗೊಳ್ಳಲಾಗಿದ್ದು, ಇಮ್ರಾನ್‌ ಅವರಿಗೆ ಐದು ವರ್ಷಗಳ ಕಾಲ ಸಾರ್ವಜನಿಕ ಹುದ್ದೆಯಲ್ಲಿರದಂತೆ ನಿಷೇಧ ಹೇರಲಾಗಿದೆ.

'ಇಮ್ರಾನ್‌ ಖಾನ್‌ ಅವರು ಆಸ್ತಿ ಘೋಷಣೆ ವೇಳೆ ‘ತೋಷಖಾನ’ (ಸರ್ಕಾರಿ ಖಜಾನೆ) ಸ್ವೀಕರಿಸಿರುವ ಉಡುಗೊರೆಗಳ ಕುರಿತ ಮಾಹಿತಿ ಬಹಿರಂಗಪಡಿಸಿಲ್ಲ. ಹೀಗಾಗಿ ಸಂವಿಧಾನದ 62 (1)(ಎಫ್‌) ವಿಧಿ ಅಡಿಯಲ್ಲಿ ಬದುಕಿರುವವರೆಗೂ ಚುನಾವಣೆಗೆ ಸ್ಪರ್ಧಿಸದಂತೆ ಅವರ ಮೇಲೆ ನಿರ್ಬಂಧ ಹೇರಬೇಕು' ಎಂದು ಆಡಳಿತರೂಢ ಪಾಕಿಸ್ತಾನ ಡೆಮಾಕ್ರಟಿಕ್‌ ಮೂವ್‌ಮೆಂಟ್‌ (ಪಿಡಿಎಂ) ಇತ್ತೀಚೆಗೆ ಚುನಾವಣಾ ಆಯೋಗಕ್ಕೆ ದೂರು ನೀಡಿತ್ತು.

ADVERTISEMENT

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.