ADVERTISEMENT

ಶಬರಿಮಲೆ ದೇಗುಲದ ಚಿನ್ನ ಕಳವು ಪ್ರಕರಣ: ಟಿಡಿಬಿ ಮಾಜಿ ಅಧ್ಯಕ್ಷನ ಬಂಧನ

ಪಿಟಿಐ
Published 11 ನವೆಂಬರ್ 2025, 14:35 IST
Last Updated 11 ನವೆಂಬರ್ 2025, 14:35 IST
..
..   

ತಿರುವನಂತಪುರ: ಶಬರಿಮಲೆ ದೇಗುಲದ ಚಿನ್ನ ಕಳವು ಪ್ರಕರಣದ ತನಿಖೆ ನಡೆಸುತ್ತಿರುವ ವಿಶೇಷ ತನಿಖಾ ತಂಡವು(ಎಸ್‌ಐಟಿ) ತಿರುವಾಂಕೂರು ದೇವಸ್ವಂ ಮಂಡಳಿ(ಟಿಡಿಬಿ) ಮಾಜಿ ಅಧ್ಯಕ್ಷ ಎನ್‌. ವಾಸು ಅವರನ್ನು ಮಂಗಳವಾರ ಬಂಧಿಸಿದೆ.

‘ಅಧ್ಯಕ್ಷರಾಗುವ ಮೊದಲು ಎರಡು ಅವಧಿಗೆ ಟಿಡಿಬಿ ಆಯುಕ್ತರಾಗಿದ್ದ ವಾಸು ಅವರನ್ನು ವಿಚಾರಣೆಗೆ ಒಳಪಡಿಸಿ ಬಳಿಕ ಬಂಧಿಸಲಾಗಿದೆ’ ಎಂದು ಮೂಲಗಳು ತಿಳಿಸಿವೆ.

ರಾಜ್ಯ ಸರ್ಕಾರದ ಪ್ರಮುಖರಿಗೆ ಆಪ್ತರಾಗಿರುವ ವಾಸು ಅವರ ಬಂಧನವು ಪ್ರಕರಣದ ಮಹತ್ವದ ಬೆಳವಣಿಗೆಯಾಗಿದೆ.

ADVERTISEMENT

ವಾಸು ಅವರು ಶಬರಿಮಲೆ ದೇಗುಲದ ಶ್ರೀಕೋವಿಲ್(ಗರ್ಭಗುಡಿ) ಬಾಗಿಲಿನ ಚೌಕಟ್ಟಿನಿಂದ ಚಿನ್ನ ಕಳವಾಗಿರುವ ಪ್ರಕರಣದ ಆರೋಪಿಗಳಲ್ಲಿ ಒಬ್ಬರು ಎಂದು ಮೂಲಗಳು ತಿಳಿಸಿವೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.