ADVERTISEMENT

'ದಿ ಗ್ರೇಟ್‌ ಖಲಿ’ ಬಿಜೆಪಿ ಸೇರ್ಪಡೆ

ಪ್ರಜಾವಾಣಿ ವೆಬ್‌ ಡೆಸ್ಕ್‌ 
Published 10 ಫೆಬ್ರುವರಿ 2022, 9:53 IST
Last Updated 10 ಫೆಬ್ರುವರಿ 2022, 9:53 IST
ಬಿಜೆಪಿ ಸೇರ್ಪಡೆಯಾದ ಖಲಿ
ಬಿಜೆಪಿ ಸೇರ್ಪಡೆಯಾದ ಖಲಿ    

ನವದೆಹಲಿ: 'ದಿ ಗ್ರೇಟ್‌ ಖಲಿ’ ಖ್ಯಾತಿಯ ವೃತ್ತಿಪರ ‘ಡಬ್ಲ್ಯುಡಬ್ಲ್ಯುಇ’ ಕುಸ್ತಿಪಟು ದಲೀಪ್ ಸಿಂಗ್ ರಾಣಾ ಇಂದು ಭಾರತೀಯ ಜನತಾ ಪಕ್ಷಕ್ಕೆ ಸೇರ್ಪಡೆಗೊಂಡಿದ್ದಾರೆ. ಪಂಜಾಬ್ ವಿಧಾನಸಭೆ ಚುನಾವಣೆ ಮತದಾನಕ್ಕೆ ಇನ್ನು ಕೆಲವು ದಿನಗಳು ಬಾಕಿ ಇರುವಾಗಲೇ ಖಲಿ ಅವರನ್ನು ಬಿಜೆಪಿಯು ಪಕ್ಷಕ್ಕೆ ಸೇರಿಸಿಕೊಂಡಿದೆ.

ಫೆಬ್ರವರಿ 20 ರಂದು ಪಂಜಾಬ್‌ನಲ್ಲಿ ಒಂದೇ ಹಂತದ ಮತದಾನ ನಡೆಯಲಿದ್ದು, ಮಾರ್ಚ್ 10 ರಂದು ಮತ ಎಣಿಕೆ ನಡೆಯಲಿದೆ.

‘ಬಿಜೆಪಿಗೆ ಸೇರ್ಪಡೆಗೊಂಡಿದ್ದಕ್ಕೆ ನನಗೆ ಸಂತೋಷವಾಗಿದೆ. ಮೋದಿ ಅವರು ರಾಷ್ಟ್ರಕ್ಕಾಗಿ ಮಾಡಿದ ಕೆಲಸವು ಅವರನ್ನು ಪ್ರಧಾನಿಯನ್ನಾಗಿ ಮಾಡಿದೆ ಎಂದು ನಾನು ಭಾವಿಸಿದ್ದೇನೆ. ಹಾಗಾಗಿ, ರಾಷ್ಟ್ರದ ಅಭಿವೃದ್ಧಿಗಾಗಿ ಅವರ ಆಡಳಿತದಲ್ಲಿ ನಾನು ಕೂಡ ಭಾಗವಾಗಬಾರದೇಕೆ ಎಂದು ಚಿಂತಿಸಿದ್ದೇನೆ’ ಎಂದು ಖಲಿ ನವದೆಹಲಿಯಲ್ಲಿನ ಬಿಜೆಪಿ ಪ್ರಧಾನ ಕಚೇರಿಯಲ್ಲಿ ಹೇಳಿದರು.

ADVERTISEMENT

ಪಕ್ಷದ ರಾಷ್ಟ್ರೀಯ ನೀತಿಯಿಂದ ಪ್ರಭಾವಿತನಾಗಿ ಬಿಜೆಪಿ ಸೇರಿದ್ದೇನೆ ಎಂದು ಖಲಿ ಹೇಳಿದ್ದಾರೆ.

ಕೇಂದ್ರದ ಕೃಷಿ ಕಾನೂನುಗಳ ವಿರುದ್ಧ 2020ರಲ್ಲಿ ದೆಹಲಿ ಗಡಿಯಲ್ಲಿ ನಡೆಯುತ್ತಿದ್ದ ಪ್ರತಿಭಟನೆಯನ್ನು ಖಲಿ ಬೆಂಬಲಿಸಿದ್ದರು. ಧರಣಿ ನಿರತ ರೈತರನ್ನು ಬೆಂಬಲಿಸುವಂತೆ ಕುಸ್ತಿಪಟು ಖಲಿ ಭಾರತೀಯರಿಗೆ ಮನವಿ ಮಾಡಿದ್ದರು.

ಖಲಿ 2000 ರಲ್ಲಿ ತಮ್ಮ ವೃತ್ತಿಪರ ಕುಸ್ತಿಗೆ ಪಾದಾರ್ಪಣೆ ಮಾಡಿದರು. ಡಬ್ಲ್ಯುಡಬ್ಲ್ಯುಇಗೆ ಸೇರುವ ಮುನ್ನ ಅವರು ಪಂಜಾಬ್‌ನಲ್ಲಿ ಪೋಲಿಸ್‌ ಅಧಿಕಾರಿಯಾಗಿದ್ದರು.

ಡಬ್ಲ್ಯುಡಬ್ಲ್ಯುಇನಲ್ಲಿ ಅವರು ಚಾಂಪಿಯನ್‌ ಕೂಡ ಆಗಿದ್ದರು.

ಅವರು ನಾಲ್ಕು ಹಾಲಿವುಡ್ ಚಿತ್ರಗಳು ಮತ್ತು ಎರಡು ಬಾಲಿವುಡ್ ಚಿತ್ರಗಳಲ್ಲಿ ನಟಿಸಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.