ADVERTISEMENT

ಮಾವಿನ ತೋಟದಲ್ಲಿ ಆಟವಾಡುತ್ತಿದ್ದಾಗ ಅಪ್ಪಳಿಸಿದ ಸಿಡಿಲು: ನಾಲ್ಕು ಮಕ್ಕಳು ದಾರುಣ ಸಾವು

ಪಿಟಿಐ
Published 1 ಮೇ 2023, 2:35 IST
Last Updated 1 ಮೇ 2023, 2:35 IST
ಸಾಂದರ್ಭಿಕ ಚಿತ್ರ
ಸಾಂದರ್ಭಿಕ ಚಿತ್ರ   

ಸಾಹೀಬ್‌ಗಂಜ್: ಮಾವಿನ ತೋಟದಲ್ಲಿ ಆಟವಾಡುತ್ತಿದ್ದಾಗ ಸಿಡಿಲು ಬಡಿದು ನಾಲ್ಕು ಮಕ್ಕಳು ದಾರುಣವಾಗಿ ಮೃತರಾಗಿರುವ ಘಟನೆ ಜಾರ್ಖಂಡ್‌ನ ಸಾಹೀಬ್‌ಗಂಜ್ ಜಿಲ್ಲೆಯ ರಾಧಾನಗರ್ ಪೊಲೀಸ್ ಠಾಣೆ ವ್ಯಾಪ್ತಿಯ ಬಾಬುಟೊಲಾ ಎಂಬಲ್ಲಿ ಭಾನುವಾರ ಸಂಜೆ ನಡೆದಿದೆ.

ಘಟನೆಯಲ್ಲಿ ಇನ್ನೊಬ್ಬ ಬಾಲಕ ಗಂಭೀರವಾಗಿ ಗಾಯಗೊಂಡಿದ್ದು ಆತನನ್ನು ಸನಿಹದ ಸರ್ಕಾರಿ ಆಸ್ಪತ್ರೆಗೆ ದಾಖಲಿಸಲಾಗಿದೆ ಎಂದು ಸಾಹೀಬಗಂಜ್ ಜಿಲ್ಲೆಯ ಎಸ್‌ಪಿ ಅನುರಂಜನ್ ಕಿಸಪೊಟ್ಟಾ ತಿಳಿಸಿದ್ದಾರೆ.

ಮೃತ ಮಕ್ಕಳೆಲ್ಲ 9ರಿಂದ 12ರ ವಯೋಮಾನದವರಾಗಿದ್ದಾರೆ. ಮೃತರಲ್ಲಿ ಹುಮಾಯೂನ್ ಶೇಕ್ ಎನ್ನುವರ 12 ವರ್ಷದ ಮಗಳು, 9 ವರ್ಷದ ಮಗ ಹಾಗೂ ಮೆಹಬೂಬ್ ಶೇಕ್ ಎನ್ನುವರ 10 ವರ್ಷದ ಮಗ ಮತ್ತು ಅಶ್ರಫುಲ್ ಶೇಕ್ ಎನ್ನುವರ 9 ವರ್ಷದ ಮಗ ಸೇರಿದ್ದಾರೆ.

ADVERTISEMENT

ಈ ಬಾಲಕರು ರಜೆ ಪ್ರಯುಕ್ತ ಗ್ರಾಮದ ಸನಿಹದ ಮಾವಿನ ತೋಟವೊಂದರ ಬಳಿ ಆಟವಾಡುತ್ತಿದ್ದರು. ಈ ವೇಳೆ ಮಳೆ ಬರುವ ಮುನ್ಸೂಚನೆ ಅರಿತು ಮಾವಿನ ಗಿಡದ ಕೆಳಗೆ ಆಶ್ರಯ ಪಡೆಯಲು ಹೋಗಿದ್ದರು. ಆಗ ಸಿಡಿಲು ಬಡಿದು ನಾಲ್ವರು ಬಾಲಕರು ಸ್ಥಳದಲ್ಲೇ ಮೃತರಾಗಿದ್ದಾರೆ ಎಂದು ಎಸ್‌ಪಿ ಅನುರಂಜನ್ ತಿಳಿಸಿದ್ದಾರೆ.

ಈ ಬಗ್ಗೆ ಆಘಾತ ವ್ಯಕ್ತಪಡಿಸಿರುವ ಮುಖ್ಯಮಂತ್ರಿ ಹೇಮಂತ್ ಸೋರೆನ್ ಅವರು, ಮೃತ ಬಾಲಕರ ಪಾಲಕರಿಗೆ ಸಾಂತ್ವಾನ ಹೇಳಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.