ADVERTISEMENT

ಪಂಜಾಬ್ ಕಾಂಗ್ರೆಸ್‌ನ ಹಲವು ನಾಯಕರು ಬಿಜೆಪಿಗೆ

ಪಿಟಿಐ
Published 4 ಜೂನ್ 2022, 12:37 IST
Last Updated 4 ಜೂನ್ 2022, 12:37 IST
ಪ್ರಾತಿನಿಧಿಕ ಚಿತ್ರ
ಪ್ರಾತಿನಿಧಿಕ ಚಿತ್ರ   

ಚಂಡೀಗಡ: ಪಂಜಾಬ್‌ ಕಾಂಗ್ರೆಸ್‌ನ ನಾಲ್ವರು ಮಾಜಿ ಸಚಿವರು ಸೇರಿದಂತೆ ಒಟ್ಟು ಎಂಟು ಮಂದಿ ಶನಿವಾರ ಬಿಜೆಪಿಗೆ ಸೇರ್ಪಡೆಯಾಗಿದ್ದಾರೆ.

ಮಾಜಿ ಸಚಿವರಾದ ರಾಜ್‌ ಕುಮಾರ್‌ ವೆರ್ಕಾ, ಬಲ್ಬಿರ್‌ ಸಿಂಗ್‌ ಸಿಧು, ಸುಂದರ್‌ ಶ್ಯಾಮ್‌ ಅರೋರ ಮತ್ತು ಗುರ್‌ಪ್ರೀತ್‌ ಸಿಂಗ್ ಕಂಗಾರ್‌,ಮಾಜಿ ಶಾಸಕ ಬರ್ನಲ್‌ ಕೆವಾಲ್‌ ಧಿಲ್ಲಾನ್‌ಕಾಂಗ್ರೆಸ್‌ ತೊರೆದವರು. ಎಸ್‌ಎಡಿಯ ಮಾಜಿ ಶಾಸಕರಾದ ಸರೂಪ್‌ ಚಂದ್‌ ಸಿಂಗ್ಲಾ ಮತ್ತು ಮೋಹಿಂದರ್‌ ಕೌರ್‌ ಜೋಶ್‌ ಅವರೂ ಬಿಜೆಪಿ ಸೇರಿದ್ದಾರೆ.

ಇವರೆಲ್ಲ, ಕೇಂದ್ರ ಸಚಿವರಾದ ಗಜೇಂದ್ರ ಸಿಂಗ್ ಶೇಖಾವತ್, ಸೋಮ್‌ ಪ್ರಕಾಶ್‌ ಮತ್ತು ಪಕ್ಷದ ರಾಜ್ಯ ಘಟಕದ ಅಧ್ಯಕ್ಷ ಅಶ್ವಿನಿ ಶರ್ಮಾ ಅವರ ಸಮ್ಮುಖದಲ್ಲಿ ಬಿಜೆಪಿಗೆ ಸೇರ್ಪಡೆಯಾಗಿದ್ದಾರೆ.

ADVERTISEMENT

ಮೊಹಾಲಿಯಿಂದ ಮೂರು ಬಾರಿ ಶಾಸಕರಾಗಿ ಆಯ್ಕೆಯಾಗಿದ್ದ ಬಲ್ಬೀರ್‌ ಸಿಧು,ರಾಮ್‌ಪುರ ಫುಲ್‌ನಿಂದ ಮೂರು ಸಲ ಗೆದ್ದಿದ್ದ ಗುರ್‌ಪ್ರೀತ್‌ ಹಾಗೂ'ಮಝಾ' ಭಾಗದ ಪ್ರಮುಖ ದಲಿತ ನಾಯಕ ರಾಜ್‌ ಕುಮಾರ್‌ ಅವರು ಕಳೆದ ಬಾರಿ (2017-2022) ಕಾಂಗ್ರೆಸ್‌ ಸರ್ಕಾರವಿದ್ದಾಗ ಸಚಿವರಾಗಿದ್ದರು.

ಹೊಶಿಯಾರ್‌ಪುರ ಕ್ಷೇತ್ರದ ಮಾಜಿ ಶಾಸಕ ಸುಂದರ್‌, ಕಳೆದ ಬಾರಿ ಕೈಗಾರಿಕೆ ಮತ್ತು ವಾಣಿಜ್ಯ ಸಚಿವರಾಗಿದ್ದರು.

ಬಲ್ಬೀರ್‌ ಸಿಧು ಅವರ ಸಹೋದರ ಹಾಗೂ ಮೊಹಾಲಿ ಪಾಲಿಕೆಯ ಮೇಯರ್‌ ಅಮರ್‌ಜಿತ್‌ ಸಿಂಗ್‌ ಸಿಧು ಅವರೂ ಬಿಜೆಪಿಗೆ ಸೇರ್ಪಡೆಯಾಗಿದ್ದಾರೆ.

ಕೇಂದ್ರ ಗೃಹ ಸಚಿವ ಅಮಿತ್‌ ಶಾ ಅವರು ಇಂದು (ಶನಿವಾರ) ಚಂಡೀಗಡಕ್ಕೆ ಆಗಮಿಸಲಿದ್ದು, ಪಕ್ಷದ ನಾಯಕರೊಂದಿಗೆ ಮಾತುಕತೆ ನಡೆಸಲಿದ್ದಾರೆ. ಹರಿಯಾಣದ ಪಂಚಕುಲದಲ್ಲಿ ನಡೆಯಲಿರುವ ಖೇಲೊ ಇಂಡಿಯಾ ಯೂತ್‌ ಗೇಮ್ಸ್‌ಗೆ ಇಂದು ರಾತ್ರಿ ಚಾಲನೆ ನೀಡಲಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.