ADVERTISEMENT

ರಫೇಲ್‌: ಫ್ರಾನ್ಸ್‌ನಲ್ಲಿ ದೂರು–ವಿಪಕ್ಷಗಳಿಗೆ ಹೊಸ ಅಸ್ತ್ರ

​ಪ್ರಜಾವಾಣಿ ವಾರ್ತೆ
Published 24 ನವೆಂಬರ್ 2018, 20:01 IST
Last Updated 24 ನವೆಂಬರ್ 2018, 20:01 IST
ರಫೇಲ್‌ ಯುದ್ಧ ವಿಮಾನ
ರಫೇಲ್‌ ಯುದ್ಧ ವಿಮಾನ   

ನವದೆಹಲಿ: ಭಾರತ ಮತ್ತು ಫ್ರಾನ್ಸ್‌ ನಡುವಿನ ರಫೇಲ್‌ ಯುದ್ಧ ವಿಮಾನ ಖರೀದಿ ಒಪ್ಪಂದ ಕುರಿತು ಇದೇ ಮೊದಲ ಬಾರಿಗೆ ಫ್ರಾನ್ಸ್‌ನ ಫೈನಾನ್ಷಿಯಲ್‌ ಪ್ರಾಸಿಕ್ಯೂಟರ್ ಕಚೇರಿಯಲ್ಲಿ ದೂರು ದಾಖಲಾಗಿದೆ.

ಆರ್ಥಿಕ ಅಪರಾಧಗಳ ವಿರುದ್ಧ ಹೋರಾಡುತ್ತಿರುವ ಫ್ರಾನ್ಸ್‌ನ ಸ್ವಯಂ ಸೇವಾ ಸಂಸ್ಥೆ ‘ಶೆರ್ಪಾ’ ಈ ದೂರು ದಾಖಲಿಸಿದೆ.

ಈ ಸುದ್ದಿ ಹೊರಬೀಳುತ್ತಲೇ ಕಾಂಗ್ರೆಸ್‌, ಸಿಪಿಎಂ ಸೇರಿದಂತೆ ಎಲ್ಲ ವಿರೋಧ ಪಕ್ಷಗಳು ಪ್ರಧಾನಿ ನರೇಂದ್ರ ಮೋದಿ ವಿರುದ್ಧ ಮತ್ತೊಮ್ಮೆ ಮೈಕೊಡವಿ ಎದ್ದು ನಿಂತಿವೆ.

ADVERTISEMENT

‘ಇಡೀ ವಿಶ್ವವೇ ಹಿಂದೂಸ್ತಾನದ ಚೌಕಿದಾರನ ಕಳ್ಳತನದ ಬಗ್ಗೆ ಮಾತನಾಡುವಂತಾಗಿದೆ’ ಎಂದು ಕಾಂಗ್ರೆಸ್‌ ಅಧ್ಯಕ್ಷ ರಾಹುಲ್‌ ಗಾಂಧಿ ಟ್ವೀಟ್‌ ಮಾಡಿದ್ದಾರೆ.

ಸ್ಪಷ್ಟನೆ ಕೋರಿದ ಸಂಸ್ಥೆ

ಫ್ರಾನ್ಸ್‌ ಯಾವ ಸಂದರ್ಭದಲ್ಲಿ ಭಾರತಕ್ಕೆ 36 ರಫೇಲ್‌ ಯುದ್ಧ ವಿಮಾನ ಮಾರಾಟ ಮಾಡಿದೆ ಎಂದು ‘ಶೆರ್ಪಾ’ ಮಾಹಿತಿ ಕೋರಿದೆ.

ಡಾಸೊ ಏವಿಯೇಶನ್‌ ಸಂಸ್ಥೆಯು ಉದ್ಯಮಿ ಅನಿಲ್‌ ಅಂಬಾನಿ ಒಡೆತನದ ರಿಲಯನ್ಸ್‌ ಡಿಫೆನ್ಸ್‌ ಕಂಪನಿಯನ್ನು ತನ್ನ ಭಾರತೀಯ ಸಹಭಾಗಿತ್ವ ಕಂಪನಿಯಾಗಿ ಆಯ್ಕೆ ಮಾಡಿಕೊಂಡ ಬಗ್ಗೆಯೂ ಸಂಸ್ಥೆ ಮಾಹಿತಿ ಕೇಳಿದೆ.

ಭಾರತ ಸರ್ಕಾರದ ಒತ್ತಡದ ಮೇರೆಗೆ ರಿಲಯನ್ಸ್‌ ಡಿಫೆನ್ಸ್‌ ಕಂಪನಿಯನ್ನು ಮಿತ್ರಸಂಸ್ಥೆಯನ್ನಾಗಿ ಆಯ್ಕೆ ಮಾಡಿಕೊಳ್ಳಲಾಗಿತ್ತು ಎಂದು ಫ್ರಾನ್ಸ್‌ ಮಾಜಿ ಅಧ್ಯಕ್ಷ ಫ್ರಾಂಕೋಯಿಸ್‌ ಹಾಲನ್‌ ಹೇಳಿದ್ದು ಭಾರಿ ಕೋಲಾಹಲ ಸೃಷ್ಟಿಸಿತ್ತು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.