ADVERTISEMENT

Video| ಜಮ್ಮು ಕಾಶ್ಮೀರ ಹಿಮಪಾತದ ರುದ್ರರಮಣೀಯ ದೃಶ್ಯ ಕ್ಯಾಮೆರಾದಲ್ಲಿ ಸೆರೆ

ಪ್ರಜಾವಾಣಿ ವೆಬ್‌ ಡೆಸ್ಕ್‌ 
Published 12 ಜನವರಿ 2023, 7:15 IST
Last Updated 12 ಜನವರಿ 2023, 7:15 IST
ಸಾಂದರ್ಭಿಕ ಚಿತ್ರ
ಸಾಂದರ್ಭಿಕ ಚಿತ್ರ    

ಸೋನಾಮಾರ್ಗ: ಜಮ್ಮು ಮತ್ತು ಕಾಶ್ಮೀರದ ಜನಪ್ರಿಯ ಗಿರಿಧಾಮ ಸೋನಾಮಾರ್ಗದಲ್ಲಿ ಗುರುವಾರ ಎರಡು ಹಿಮ ಹಿಮಪಾತಗಳಾಗಿವೆ. ಕಣಿವೆಯ ಎತ್ತರದ ಪ್ರದೇಶಗಳಲ್ಲಿ ಹಿಮ ಸುರಿಯುತ್ತಿರುವುದರ ಪರಿಣಾಮವಾಗಿ ಈ ಘಟನೆ ನಡೆದಿದೆ.

ವರದಿಗಳ ಪ್ರಕಾರ, ಮಧ್ಯ ಕಾಶ್ಮೀರದ ಗಂದರ್‌ಬಾಲ್ ಜಿಲ್ಲೆಯ ಸೋನಾಮಾರ್ಗದ ಬಾಲ್ಟಾಲ್ ಪ್ರದೇಶದ ಬಳಿ ಹಿಮಕುಸಿತವಾಗಿದೆ.

ಜಮ್ಮು ಮತ್ತು ಕಾಶ್ಮೀರದಲ್ಲಿ ಕನಿಷ್ಠ ತಾಪಮಾನವು ಘನೀಕರಣ ಹಂತಕ್ಕಿಂತಲೂ ಹಲವು ಡಿಗ್ರಿಗಳಷ್ಟು ಕಡಿಮೆಯಾಗಿದೆ. ಈ ಕಾರಣ ಕಾಶ್ಮೀರದಲ್ಲಿ ಶೀತದ ಪರಿಸ್ಥಿತಿ ತೀವ್ರಗೊಂಡಿದೆ. ಅನೇಕ ಕಡೆಗಳಲ್ಲಿ ಈ ಋತುವಿನಲ್ಲೇ ಅತ್ಯಂತ ಕನಿಷ್ಠ ತಾಪಮಾನ ವರದಿಯಾಗಿದೆ ಎಂದು ಅಧಿಕಾರಿಗಳು ಭಾನುವಾರ ತಿಳಿಸಿದ್ದಾರೆ.

ADVERTISEMENT

ಉತ್ತರಾಖಂಡದಲ್ಲೂ ಹಿಮ ಸುರಿಯುತ್ತಿದೆ. ಚಮೋಲಿ ಜಿಲ್ಲೆಯ ಔಲಿ ಮತ್ತು ಭೂಕುಸಿತಕ್ಕೆ ಗುರಿಯಾಗಿರುವ ಜೋಶಿಮಠದಲ್ಲೂ ಹಿಮಮಳೆಯಾಗುತ್ತಿದೆ. ಉತ್ತರ ಕಾಶಿಯ ಗಂಗೋತ್ರಿ ಧಾಮದಲ್ಲಿ ಉಂಟಾಗುತ್ತಿರುವ ಹಿಮಮಳೆಯ ವಿಡಿಯೊ ಕೂಡ ಸಾಮಾಜಿಕ ಮಾಧ್ಯಮದಲ್ಲಿ ಹರಿದಾಡುತ್ತಿದೆ.

ಹಿಮಾಚಲ ಪ್ರದೇಶದಲ್ಲೂ ಪರಿಸ್ಥಿತಿ ಇದಕ್ಕಿಂತ ಏನೂ ಭಿನ್ನವಾಗಿಲ್ಲ. ರಸ್ತೆಗಳಲ್ಲವೂ ಹಿಮವನ್ನೇ ಹಾಸು ಹೊದ್ದಿವೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.