ನವದೆಹಲಿ: ಏರಿಕೆ ಹಾದಿಯಲ್ಲಿದ್ದ ಇಂಧನ ದರ ಈಗ ಇಳಿಕೆಯ ಹಾದಿ ಹಿಡಿದಿದ್ದು, ಗ್ರಾಹಕರ ಮೊಗದಲ್ಲಿ ಸಂತಸ ಮೂಡಿಸಿದೆ. ಸೋಮವಾರ ರಾಜಧಾನಿ ದೆಹಲಿಯಲ್ಲಿ ಲೀಟರ್ ಪೆಟ್ರೋಲ್ಗೆ ₹78.56 ಹಾಗೂ ಡೀಸೆಲ್ಗೆ ₹73.16 ದರವಿದೆ.
ಸೋಮವಾರ ಪೆಟ್ರೋಲ್ ದರ 22 ಪೈಸೆ ಹಾಗೂ ಡೀಸೆಲ್ ದರ 20 ಪೈಸೆ ಇಳಿಕೆಯಾಗಿದೆ.ಮುಂಬೈನಲ್ಲಿ ಲೀಟರ್ ಪೆಟ್ರೋಲ್ಗೆ ₹84.06, ಡೀಸೆಲ್ಗೆ ₹76.67 ಆಗಿದೆ. ಕಳೆದ ತಿಂಗಳು ಮುಂಬೈನಲ್ಲಿ ಪೆಟ್ರೋಲ್ ದರ 90ರ ಗಡಿ ದಾಟಿತ್ತು.
ರಾಜ್ಯದ ರಾಜಧಾನಿ ಬೆಂಗಳೂರಿನಲ್ಲೂ ಪೆಟ್ರೋಲ್ 22 ಪೈಸೆ, ಡೀಸೆಲ್ 17 ಪೈಸೆ ಇಳಿದಿದ್ದು, ಪೆಟ್ರೋಲ್ ಲೀಟರ್ಗೆ ₹79.41 ಆಗಿದೆ.
ಆಗಸ್ಟ್ 16ರ ನಂತರ ತೈಲ ದರ ಏರಿಕೆ ಆರಂಭವಾಗಿತ್ತು. ಅಲ್ಲಿಂದ ಅಕ್ಟೋಬರ್ 4ರವರೆಗೆ ಪೆಟ್ರೋಲ್ ದರದಲ್ಲಿ ಬರೋಬ್ಬರಿ ₹6.86 ಹಾಗೂ ಡೀಸೆಲ್ಗೆ ₹6.73 ಏರಿಕೆಯಾಗಿತ್ತು. ಕೇಂದ್ರ ಸರ್ಕಾರ ತೈಲದ ಮೇಲಿನ ಅಬಕಾರಿ ಸುಂಕವನ್ನು ಒಂದೂವರೆ ರುಪಾಯಿ ಕಡಿತಗೊಳಿದ ನಂತರ ದರ ಇಳಿಕೆ ಹಾದಿಯಲ್ಲಿ ಸಾಗುತ್ತಿದೆ.
ರಾಜ್ಯ ಸರ್ಕಾರಗಳು ಕೂಡ ಇಂಧನದ ಮೇಲೆ ಸಬ್ಸಿಡಿ ನೀಡುವಂತೆ ಸೂಚನೆ ನೀಡಿತ್ತು. ಅದರಂತೆ ಹಲವು ರಾಜ್ಯ ಸರ್ಕಾರಗಳು ಲೀಟರ್ಗೆ ₹1ಇಳಿಕೆ ಮಾಡಿದ್ದವು.
ವಿವಿಧ ರಾಜ್ಯಗಳಲ್ಲಿ ಅ.5ರಂದು ಪ್ರತಿ ಲೀಟರ್ ತೈಲ ದರ (₹ ಗಳಲ್ಲಿ)
ರಾಜ್ಯ; ಪೆಟ್ರೋಲ್; ಡೀಸೆಲ್
ಕರ್ನಾಟಕ ; 79.07; 73.44
ತಮಿಳುನಾಡು ;82.29 ;78.00
ಆಂಧ್ರಪ್ರದೇಶ ; 85.81 ; 78.56
ತೆಲಂಗಾಣ ;83.53 ;79.82
ಮಹಾರಾಷ್ಟ್ರ ;84.62 ;76.62
ಕೇರಳ ;80.96 ;77.55
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್ಬುಕ್ ಪುಟ ಫಾಲೋ ಮಾಡಿ.