ADVERTISEMENT

ರಾಹುಲ್‌ ಪ್ರಕಾರ ಜಿ.ಡಿ.ಪಿ‌ ಎಂದರೆ ಗಾಂಧಿ, ದಿಗ್ವಿಜಯ್‌, ಪಿ‌.ಚಿದಂಬರಂ: ಮಿಶ್ರಾ

ಪ್ರಜಾವಾಣಿ ವೆಬ್‌ ಡೆಸ್ಕ್‌ 
Published 2 ಸೆಪ್ಟೆಂಬರ್ 2021, 9:55 IST
Last Updated 2 ಸೆಪ್ಟೆಂಬರ್ 2021, 9:55 IST
ರಾಹುಲ್‌ ಗಾಂಧಿ
ರಾಹುಲ್‌ ಗಾಂಧಿ   

ಭೋಪಾಲ್:‌ ಜಿಡಿಪಿ ಮತ್ತು ಇಂಧನ ದರ ಏರಿಕೆ ಸಂಬಂಧ ಕಾಂಗ್ರೆಸ್‌ ನಾಯಕ ರಾಹುಲ್‌ ಗಾಂಧಿ ಅವರು ಕೇಂದ್ರ ಸರ್ಕಾರದ ವಿರುದ್ಧ ವಾಗ್ದಾಳಿ ನಡೆಸಿರುವುದಕ್ಕೆ ಮಧ್ಯಪ್ರದೇಶ ಗೃಹಸಚಿವ ನರೋತ್ತಮ್ ಮಿಶ್ರಾ ಕಿಡಿ ಕಾರಿದ್ದಾರೆ.

ರಾಹುಲ್‌ ಗಾಂಧಿ ಅವರಿಗೆ ಜಿಡಿಪಿಯ ಅರ್ಥವೇ ಗೊತ್ತಿಲ್ಲ. ಅವರ ಪ್ರಕಾರ ಜಿ ಎಂದರೆ ಗಾಂಧಿ (ಸೋನಿಯಾ ಗಾಂಧಿ, ಪ್ರಿಯಾಂಕಾ ಗಾಂಧಿ ವಾದ್ರಾ, ರಾಹುಲ್‌ ಗಾಂಧಿ), ಡಿ ಎಂದರೆ ದಿಗ್ವಿಜಯ್‌ ಸಿಂಗ್‌ ಮತ್ತು ಪಿ ಎಂದರೆ ಪಿ. ಚಿದಂಬರಂ ಎಂದುಕೊಂಡಿದ್ದಾರೆ ಎಂದು ಮಿಶ್ರಾ ಆಕ್ರೋಶ ವ್ಯಕ್ತಪಡಿಸಿದ್ದಾರೆ.

ಬುಧವಾರ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ್ದ ರಾಹುಲ್‌ ಗಾಂಧಿ,ಕೇಂದ್ರ ಸರ್ಕಾರ ಜಿಡಿಪಿ ಎನ್ನುವ ಹೊಸ ಕಲ್ಪನೆಯನ್ನು ಆರಂಭಿಸಿದೆ. ಅಂದರೆ, ಗ್ಯಾಸ್ (ಅಡುಗೆ ಅನಿಲ), ಡೀಸೆಲ್ ಹಾಗೂ ಪೆಟ್ರೋಲ್ ಬೆಲೆ ಹೆಚ್ಚಳ ಮಾಡುವುದಾಗಿದೆ. ಇವುಗಳಿಂದ ಸಂಗ್ರಹವಾಗಿರುವ ₹23 ಲಕ್ಷ ಕೋಟಿ ಮೊತ್ತ ಎಲ್ಲಿ ಹೋಗಿದೆ ಎನ್ನುವುದನ್ನು ದೇಶದ ಜನತೆ ಪ್ರಶ್ನಿಸಬೇಕುಎಂದುಹೇಳಿದ್ದರು.

ADVERTISEMENT

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.