ADVERTISEMENT

‘ಬೀಟಿಂಗ್ ರಿಟ್ರೀಟ್‌’ನ ಸಮಾರೋಪ: ಗಾಂಧೀಜಿಗೆ ಇಷ್ಟವಾದ ಪ್ರಾರ್ಥನಾ ಗೀತೆಗೆ ಕೊಕ್‌

​ಪ್ರಜಾವಾಣಿ ವಾರ್ತೆ
Published 23 ಜನವರಿ 2022, 5:10 IST
Last Updated 23 ಜನವರಿ 2022, 5:10 IST
ದೆಹಲಿಯ ವಿಜಯ್‌ ಚೌಕ್‌ ಬಳಿ ನಡೆಯುವ ‘ಬೀಟಿಂಗ್ ರಿಟ್ರೀಟ್‌’ ಕಾರ್ಯಕ್ರಮದ ತಾಲೀಮು ನಡೆಸುತ್ತಿರುವ ಸೇನೆ ಬ್ಯಾಂಡ್ ಪಡೆ.
ದೆಹಲಿಯ ವಿಜಯ್‌ ಚೌಕ್‌ ಬಳಿ ನಡೆಯುವ ‘ಬೀಟಿಂಗ್ ರಿಟ್ರೀಟ್‌’ ಕಾರ್ಯಕ್ರಮದ ತಾಲೀಮು ನಡೆಸುತ್ತಿರುವ ಸೇನೆ ಬ್ಯಾಂಡ್ ಪಡೆ.   

ನವದೆಹಲಿ: ಗಣರಾಜ್ಯೋತ್ಸವ ಕಾರ್ಯಕ್ರಮಗಳಿಗೆ ತೆರೆಎಳೆಯುವ ನಿಮಿತ್ತ ಜ.29ರಂದು ಇಲ್ಲಿನ ವಿಜಯ್‌ಚೌಕ್‌ನಲ್ಲಿ ನಡೆಸುವ ಬೀಟಿಂಗ್‌ ರಿಟ್ರೀಟ್‌ ಕಾರ್ಯಕ್ರಮದಿಂದ ‘ಅಬೈಡ್‌ ವಿತ್ ಮಿ’ ಗೀತೆ ಕೈಬಿಡಲು ಸರ್ಕಾರ ನಿರ್ಧರಿಸಿದೆ.

ಇದು, ಮಹಾತ್ಮಗಾಂಧಿ ಅವರಿಗೆ ಅತ್ಯಂತ ಪ್ರಿಯವಾದ ಗೀತೆಯಾಗಿತ್ತು. ಬೀಟಿಂಗ್‌ ರಿಟ್ರೀಟ್‌ ಕಾರ್ಯಕ್ರಮ ಮುಗಿಯುವ ದ್ಯೋತಕವಾಗಿ ನುಡಿಸಲಾಗುತ್ತಿತ್ತು. ಶತಮಾನಗಳಷ್ಟು ಹಳೆಯದಾದ ಸೇನಾ ಸಂಪ್ರದಾಯದಲ್ಲಿ ಇದು ಬಳಕೆಯಲ್ಲಿದೆ.

‘ಶಾಶ್ವತ ಜ್ಯೋತಿ’ಯನ್ನು ಇಂಡಿಯಾ ಗೇಟ್‌ ಬಳಿಯ ಅಮರ್‌ ಜವಾನ್‌ ಜ್ಯೋತಿ ಸ್ಥಳದಿಂದ ರಾಷ್ಟ್ರೀಯ ಯುದ್ಧ ಸ್ಮಾರಕ ಸ್ಥಳಕ್ಕೆ ಸ್ಥಳಾಂತರಿಸಿದ್ದ ತೀರ್ಮಾನದ ಹಿಂದೆಯೇ ಸರ್ಕಾರದ ಈ ನಿರ್ಧಾರವೂ ಹೊರಬಿದ್ದಿದೆ.

ADVERTISEMENT

ಗಾಂಧೀಜಿ ಅವರಿಗೆ ಪ್ರಿಯವಾಗಿದ್ದ ‘ಅಬೈಡ್‌ ವಿತ್ ಮಿ’ ಗೀತೆಯು ‘ಜೀವನಪೂರ್ತಿ, ಸಾವಿನವರೆಗೂ ಜೊತೆಗೇ ಇರು’ ಎಂದು ದೇವರನ್ನು ಕೋರುವ ಪ್ರಾರ್ಥನಾ ಗೀತೆಯಾಗಿದೆ. 1847ರಲ್ಲಿ ಸ್ಕಾಟ್ಲೆಂಡ್‌ನ ಹೆನ್ರಿ ಫ್ರಾನ್ಸಿಸ್‌ ಲೈಟ್ ಅವರು ರಚಿಸಿದ್ದರು. ಅವರು ಕ್ಷಯರೋಗದಿಂದ ಮೃತಪಟ್ಟರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.