ADVERTISEMENT

ಗುಜರಾತ್‌: ಗಣೇಶ ಮೂರ್ತಿ ಮೆರವಣಿಗೆ ವೇಳೆ ಮೊಟ್ಟೆ ಎಸೆದ ಕಿಡಿಗೇಡಿಗಳು

ಪಿಟಿಐ
Published 28 ಆಗಸ್ಟ್ 2025, 2:19 IST
Last Updated 28 ಆಗಸ್ಟ್ 2025, 2:19 IST
<div class="paragraphs"><p>ಗಣೇಶ ಮೂರ್ತಿ ಮೆರವಣಿಗೆ</p></div>

ಗಣೇಶ ಮೂರ್ತಿ ಮೆರವಣಿಗೆ

   

ವಡೋದರ: ಗಣೇಶ ಮೂರ್ತಿ ಮೆರವಣಿಗೆ ವೇಳೆ ಕಿಡಿಗೇಡಿಗಳ ಗುಂಪೊಂದು ಮೊಟ್ಟೆ ಎಸೆದ ಘಟನೆ ಗುಜರಾತ್‌ನ ವಡೋದರ ನಗರದಲ್ಲಿ ನಡೆದಿದೆ.

ಘಟನೆಗೆ ಸಂಬಂಧಿಸಿದಂತೆ ಮಾಹಿತಿ ಪಡೆದ ಪೊಲೀಸರು ಇಬ್ಬರು ವ್ಯಕ್ತಿಗಳನ್ನು ಬಂಧಿಸಿ, ಬಾಲಕನನ್ನು ವಶಕ್ಕೆ ಪಡೆದಿದ್ದಾರೆ. 

ADVERTISEMENT

ಹಬ್ಬದ ಹಿನ್ನೆಲೆ ನಿಗದಿತ ಸ್ಥಳದಲ್ಲಿ ಗಣೇಶ ಮೂರ್ತಿಯನ್ನು ಪ್ರತಿಷ್ಠಾಪಿಸಲು ಮೆರವಣಿಗೆ ಮೂಲಕ  ತೆಗೆದುಕೊಂಡು ಹೋಗುವಾಗ ಒಬ್ಬ ಬಾಲಕ ಮತ್ತು ಇಬ್ಬರು ಯುವಕರು ಮೂರ್ತಿಗೆ ಮೊಟ್ಟೆಯನ್ನು ಎಸೆದಿದ್ದಾರೆ. ಒಂದು ಮೊಟ್ಟೆ ಮೂರ್ತಿಗೆ ತಾಗಿದೆ. ಗಣೇಶ ಮೂರ್ತಿಯನ್ನು ಅಪವಿತ್ರಗೊಳಿಸಿದ್ದಾರೆ ಎಂದು ಗಲಾಟೆ ಆರಂಭವಾಗಿದ್ದು, ಉದ್ವಿಗ್ನತೆಗೆ ಕಾರಣವಾಯಿತು. ಸಿಸಿಟಿವಿ ದೃಶ್ಯಗಳನ್ನು ಪರಿಶೀಲನೆ ನಡೆಸಿದ ಬಳಿಕ ಮೂವರು ಆರೋಪಿಗಳನ್ನು ಪತ್ತೆ ಮಾಡಲಾಗಿದೆ ಎಂದು ಪೊಲೀಸರು ಮಾಹಿತಿ ನೀಡಿದ್ದಾರೆ.

ಬಂಧಿತರನ್ನು ಸುಫಿಯಾನ್ ಮನ್ಸುರಿ (20), ಶಹನವಾಜ್ ಖುರೇಷಿ (29) ಇನ್ನೊಬ್ಬ ಅಪ್ರಾಪ್ತನಾಗಿದ್ದಾನೆ ಎಂದು ಪೊಲೀಸರು ತಿಳಿಸಿದ್ದಾರೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.