ADVERTISEMENT

ದೆಹಲಿಯ ಐಜಿಎನ್‌ಸಿಎನಲ್ಲಿ ಗಣೇಶನ ಶಿಲ್ಪಗಳ ಪ್ರದರ್ಶನ ಆರಂಭ

ಪಿಟಿಐ
Published 28 ಆಗಸ್ಟ್ 2025, 6:43 IST
Last Updated 28 ಆಗಸ್ಟ್ 2025, 6:43 IST
   

ನವದೆಹಲಿ : ಗಣೇಶ ಚತುರ್ಥಿಯ ಭಾಗವಾಗಿ ಬ್ರಿಟಿಷ್ ಕಲಾ ಇತಿಹಾಸಕಾರ ಲ್ಯಾನ್ಸ್ ಡೇನ್ ಅವರು ಸಂಗ್ರಹಿಸಿದ ಗಣೇಶ ಶಿಲ್ಪಗಳ ಪ್ರದರ್ಶವನ್ನು ಐಜಿಎನ್‌ಸಿಎ ನಲ್ಲಿ ಆಯೋಜಿಸಲಾಗಿದೆ. ಇದು ಸೆ.5 ರ ವರೆಗೆ ಪ್ರದರ್ಶನಗೊಳ್ಳಲಿದೆ ಎಂದು ಸಂಸ್ಕೃತಿ ಸಚಿವಾಲಯ ತಿಳಿಸಿದೆ.

ಡೇನ್ ಅವರು ಪ್ರಸಿದ್ಧ ಬ್ರಿಟಿಷ್ ಕಲಾ ಇತಿಹಾಸಕಾರ ಹಾಗೂ ಸಂಗ್ರಾಹಕರಾಗಿದ್ದರು. ಅವರು ತಮ್ಮ ಜೀವನದ ಬಹುಪಾಲು ಸಮಯವನ್ನು ಕಲೆಗೆ ಮುಡುಪಾಗಿಟ್ಟಿದ್ದರು. 12ರಿಂದ 20ನೇ ಶತಮಾನದವರೆಗೆ ರಚಿಸಲಾದ ಗಣೇಶನ ವಿವಿಧ ರೂಪದ ಶಿಲ್ಪಗಳನ್ನು ಇವರು ಸಂಗ್ರಹಿಸಿದ್ದರು. ಇದನ್ನು ಇಲ್ಲಿ ಪ್ರದರ್ಶನಕ್ಕೆ ಇಡಲಾಗಿದೆ ಎಂದು ಸಚಿವಾಲಯ ಹೇಳಿದೆ.

ಇಂದಿರಾ ಗಾಂಧಿ ರಾಷ್ಟ್ರೀಯ ಕಲಾ ಕೇಂದ್ರದಲ್ಲಿ (ಐಜಿಎನ್‌ಸಿಎ) ದಲ್ಲಿ ಈ ಪ್ರದರ್ಶನವನ್ನು ಆಯೋಜಿಸಲಾಗಿದೆ. ಪ್ರದರ್ಶನದಲ್ಲಿ ಐಜಿಎನ್‌ಸಿಎ ಸಂರಕ್ಷಣಾ ವಿಭಾಗವು ವಿಘ್ನೇಶ್ವರ ಕುಟುಂಬ, ‘ಗಣೇಶ ಮತ್ತು ಅವನ ಕುಟುಂಬ' ಎಂಬ ಶೀರ್ಷಿಕೆಯಡಿ ಶಿವ, ಪಾರ್ವತಿಯ, ಗಣೇಶನ ಸಹೋದರ ಕಾರ್ತಿಕೇಯ ಹಾಗೂ ಗಣೇಶನ ವಿವಿಧ ರೂಪಗಳನ್ನು ಪ್ರಸ್ತುತಪಡಿಸಿದೆ.  

ADVERTISEMENT

ಪ್ರದರ್ಶನದ ಕುರಿತು ಐಜಿಎನ್‌ಸಿಎ ಅಧ್ಯಕ್ಷ ರಾಮ್ ಬಹದ್ದೂರ್ ರಾಯ್ ಮಾತಾನಾಡಿ, ಯುವ ಪೀಳಿಗೆಗೆ ಹಳೆಯ ಸಾಂಸ್ಕೃತಿಕ ಪರಂಪರೆಯ ಮಹತ್ವವನ್ನು ಒತ್ತಿ ಹೇಳಿದರು.

ಈ ಶಿಲ್ಪ ಪ್ರದರ್ಶನದಲ್ಲಿ ಲ್ಯಾನ್ಸ್ ಡೇನ್ ಅವರು ಸಂಗ್ರಹಿಸಿದ ಗಣೇಶ ಶಿಲ್ಪಗಳನ್ನು ಪ್ರದರ್ಶನಕ್ಕೆ ಇಡಲಾಗಿದೆ. ಇಂತಹ ಸಂಗ್ರಹವು ಜನರಿಗೆ ತೃಪ್ತಿಯನ್ನು ನೀಡುತ್ತದೆ. ಇದರ ಜೊತೆಗೆ ದೇಶದ ಸಾಂಸ್ಕೃತಿಕ ಪರಂಪರೆಯನ್ನು ಚಿತ್ರಿಸುವ ವಿವಿಧ ಶಿಲ್ಪಕಲೆಗಳ ಸಂಗ್ರಹವನ್ನು ತರಲಾಗುತ್ತದೆ. ಇದು ಜನರನ್ನು ಕಲೆಯೊಂದಿಗೆ ಸಂಪರ್ಕಿಸಲು ಸಹಕಾರಿಯಾಗಿದೆ ಎಂದು ಸಚಿವಾಲಯವು ಹೇಳಿದೆ. 

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.