ADVERTISEMENT

ಉತ್ತರ ಪ್ರದೇಶ: ದರೋಡೆಕೋರನಿಗೆ ಗುಂಡು

ಪಿಟಿಐ
Published 21 ಮೇ 2025, 12:23 IST
Last Updated 21 ಮೇ 2025, 12:23 IST
<div class="paragraphs"><p>ಸಾವು&nbsp;(ಪ್ರಾತಿನಿಧಿಕ ಚಿತ್ರ)</p></div>

ಸಾವು (ಪ್ರಾತಿನಿಧಿಕ ಚಿತ್ರ)

   

ಗೋಂಡ: ಉತ್ತರ ಪ್ರದೇಶದ ಗೋಂಡದಲ್ಲಿ ಪೊಲೀಸರ ಜೊತೆ ನಡೆದ ಗುಂಡಿನ ಚಕಮಕಿಯಲ್ಲಿ ₹1 ಲಕ್ಷ ಬಹುಮಾನ ಘೋಷಿಸಲಾಗಿದ್ದ ದರೋಡೆಕೋರ ಸೋನು ಪಾಸಿ ಎಂಬಾತ ಹತನಾಗಿದ್ದಾನೆ. ಕೊಲೆ, ಸುಲಿಗೆ, ದರೋಡೆ ಸೇರಿದಂತೆ 53 ಗಂಭೀರ ಪ್ರಕರಣಗಳಲ್ಲಿ ಈತ ಪೊಲೀಸರಿಗೆ ಬೇಕಾಗಿದ್ದ ಎಂದು ಮಂಗಳವಾರ ಅಧಿಕಾರಿಗಳು ತಿಳಿಸಿದ್ದಾರೆ.

ಸೋನು ಪಾಸಿ ಅಲಿಯಾಸ್ ಭೂರೆ ಸೊನೌಲಿ ಮಹಮ್ಮದ್ ಪುರ ಬಾಂಧಾ ಬಳಿ ಇರುವ ಮಾಹಿತಿ ಆಧರಿಸಿ ವಿಶೇಷ ಕಾರ್ಯಾಚರಣೆ ತಂಡ ಮತ್ತು ಖೋದರೆ ಪೊಲೀಸ್ ಠಾಣೆಯ ಸಿಬ್ಬಂದಿ ಜಂಟಿ ಕಾರ್ಯಾಚರಣೆ ನಡೆಸಿದ್ದರು. ಅಧಿಕಾರಿ ಮೇಲೆ ಗುಂಡು ಹಾರಿಸಿ ಪಾಸಿ ಪರಾರಿಯಾಗಲು ಯತ್ನಿಸಿದಾಗ ಪೊಲೀಸರು ಪ್ರತಿ ದಾಳಿ ನಡೆಸಿದ್ದರು ಎಂದು ಗೋಂಡ ಜಿಲ್ಲಾ ಎಸ್‌.ಪಿ. ವಿನೀತ್ ಜೈಸ್ವಾಲ್‌ ತಿಳಿಸಿದ್ದಾರೆ.

ADVERTISEMENT

ಪಾಸಿಯಿಂದ 32 ಪಿಸ್ತೂಲು, 315 ದೇಸಿ ಬಂದೂಕುಗಳು ಮತ್ತು ಸಿಡಿಗುಂಡುಗಳನ್ನು ವಶಕ್ಕೆ ಪಡೆಯಲಾಗಿದೆ. ಗುಂಡು ನಿರೋಧಕ ಕವಚ ಧರಿಸಿದ್ದ ಅಧಿಕಾರಿಗೆ ಪಾಸಿ ಹಾರಿಸಿದ ಒಂದು ಗುಂಡು ತಗುಲಿದ್ದು ಅವರಿಗೆ ಯಾವುದೇ ಗಾಯಗಳಾಗಿಲ್ಲ. 

ಕಳೆದ ತಿಂಗಳು ಉಮ್ರಿ ಬೇಗಮ್‌ಗಂಜ್‌ನಲ್ಲಿ ಕಳ್ಳತನ ವೇಳೆ ಹಿಡಿಯಲು ಬಂದ ಸ್ಥಳೀಯ ವ್ಯಕ್ತಿಯನ್ನು ಪಾಸಿ ಗುಂಡು ಹಾರಿಸಿ ಕೊಂದು ಪರಾರಿಯಾಗಿದ್ದ.  ತಲೆಮರೆಸಿಕೊಂಡು ಓಡಾಡುತ್ತಿದ್ದ ಈತನ ಬಗ್ಗೆ ಮಾಹಿತಿ ಕೊಟ್ಟವರಿಗೆ ₹1 ಲಕ್ಷ ಬಹುಮಾನ ಘೋಷಣೆ ಮಾಡಲಾಗಿತ್ತು ಎಂದು ಎಸ್‌ಪಿ ತಿಳಿಸಿದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.