ADVERTISEMENT

ಗ್ಯಾಂಗ್‌ಸ್ಟರ್‌ಗೆ ಸೇರಿದ್ದ ₹100 ಕೋಟಿ ಮೌಲ್ಯದ ಆಸ್ತಿ ವಶಕ್ಕೆ: ನೊಯ್ಡಾ ಪೊಲೀಸರು

ಪಿಟಿಐ
Published 3 ಜನವರಿ 2024, 15:57 IST
Last Updated 3 ಜನವರಿ 2024, 15:57 IST
<div class="paragraphs"><p>ಪ್ರಾತಿನಿಧಿಕ ಚಿತ್ರ</p></div>

ಪ್ರಾತಿನಿಧಿಕ ಚಿತ್ರ

   

ನೊಯ್ಡಾ: ಸಂಘಟಿತ ಮಾಫಿಯಾ ನಡೆಸುತ್ತಿದ್ದ ಗ್ಯಾಂಗ್‌ಸ್ಟರ್‌ಗೆ ಸೇರಿದ್ದ ಸುಮಾರು ₹100 ಕೋಟಿ ಮೌಲ್ಯದ ಆಸ್ತಿಯನ್ನು ಅಧಿಕಾರಿಗಳು ಬುಧವಾರ ವಶಕ್ಕೆ ಪಡೆದಿದ್ದಾರೆ.

ರವಿ ನಗರದ ರವೀಂದ್ರ ಸಿಂಗ್ ಅಲಿಯಾಸ್ ರವಿ ‘ಕಾನಾ’ ಎಂಬ ಗ್ಯಾಂಗ್‌ಸ್ಟರ್‌ ವಿರುದ್ಧ ಹಲವು ಪ್ರಕರಣಗಳು ದಾಖಲಾಗಿವೆ. ಉತ್ತರ ಪ್ರದೇಶದ ಗ್ಯಾಂಗ್‌ಸ್ಟರ್‌ ಕಾಯ್ದೆ ಅಡಿಯಲ್ಲಿ ಈತನ ವಿರುದ್ಧ ಎಫ್‌ಐಆರ್ ದಾಖಲಾಗಿತ್ತು.

ADVERTISEMENT

ಕಾನಾ ವಿರುದ್ಧ ಕಾರ್ಯಾಚರಣೆ ನಡೆಸಿದ ಬಿಟಾ 2 ಠಾಣೆಯ ಪೊಲೀಸರು, ಗ್ರೇಟರ್ ನೊಯ್ಡಾದಲ್ಲಿ ಈತನಿಗೆ ಸೇರಿದ ಆಸ್ತಿಗಳನ್ನು ವಶಕ್ಕೆ ಪಡೆದಿದ್ದಾರೆ.

ಈತ ಗುಜರಿ ವ್ಯಾಪಾರಿಯಾಗಿರುವ ಈತನ ವಿರುದ್ಧ ಸೆಕ್ಟರ್ 39 ಪೊಲಿಸ್ ಠಾಣೆಯಲ್ಲಿ ಡಿ. 30ರಂದು ಎಫ್‌ಐಆರ್‌ ದಾಖಲಾಗಿತ್ತು. ಈತನೊಂದಿಗೆ ಇತರ ಐವರು ಸೇರಿ ಶಾಪಿಂಗ್ ಮಾಲ್‌ನಲ್ಲಿ ನಿಲ್ಲಿಸಲಾಗಿದ್ದ ಕಾರಿನಲ್ಲಿ ಮಹಿಳೆ ಮೇಲೆ ಸಾಮೂಹಿಕ ಅತ್ಯಾಚಾರ ಎಸಗಿದ್ದ ಪ್ರಕರಣದ ವಿಚಾರಣೆಯನ್ನೂ ಪೊಲೀಸರು ನಡೆಸುತ್ತಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.