ADVERTISEMENT

ಗುಜರಾತ್‌ನ ಗಾರ್ಬಾ ನೃತ್ಯಕ್ಕೆ ಯುನೆಸ್ಕೊ ಮಾನ್ಯತೆ

ಪಿಟಿಐ
Published 7 ಡಿಸೆಂಬರ್ 2023, 12:31 IST
Last Updated 7 ಡಿಸೆಂಬರ್ 2023, 12:31 IST
<div class="paragraphs"><p>ಗಾರ್ಬಾ ನೃತ್ಯ</p></div>

ಗಾರ್ಬಾ ನೃತ್ಯ

   

ಪಿಟಿಐ ಚಿತ್ರ

ಅಹಮದಾಬಾದ್‌: ಗುಜರಾತಿಗಳ ಸಾಂಪ್ರದಾಯಿಕ ನೃತ್ಯ ‘ಗಾರ್ಬಾ’ ಯುನೆಸ್ಕೊ ಪಟ್ಟಿ ಸೇರಿದೆ.

ADVERTISEMENT

ನವರಾತ್ರಿ ಸಮಯದಲ್ಲಿ ಗುಜರಾತ್‌ ಸೇರಿದಂತೆ ದೇಶದ ಹಲವೆಡೆ ಗಾರ್ಬಾ ನೃತ್ಯ ಮಾಡಲಾಗುತ್ತದೆ. ಹಳೆಯ ಪದ್ಧತಿ ಪ್ರಕಾರ ದೇವಿಯು ಗಾರ್ಬಾ ರೂಪದಲ್ಲಿ ಜೀವಂತವಾಗಿದ್ದಾರೆ ಎಂದು ಜನರು ನಂಬುತ್ತಾರೆ. ವಿಭಿನ್ನ ಉಡುಗೆ ತೊಟ್ಟು ವೃತ್ತಾಕಾರವಾಗಿ ನೃತ್ಯ ಮಾಡುವ ಈ ಪಧ್ಧತಿಯನ್ನು ‘ಮಾನವೀಯತೆಯ ಅಮೂರ್ತ ಸಾಂಸ್ಕೃತಿಕ ಪರಂಪರೆ (ಐಸಿಎಚ್‌)’ ಎಂದು ಗುರುತಿಸಿ ಯುನೆಸ್ಕೊ ಪ್ರಾತಿನಿಧಿಕ ಪಟ್ಟಿಗೆ ಸೇರಿಸಲಾಗಿದೆ. ಈ ಕುರಿತು ಗುಜರಾತ್‌ ಮುಖ್ಯಮಂತ್ರಿ ಭೂಪೇಂದ್ರ ಪಟೇಲ್‌ ಅವರು ಎಕ್ಸ್‌ ತಾಣದಲ್ಲಿ ಮಾಹಿತಿ ಹಂಚಿಕೊಂಡಿದ್ದಾರೆ. 

ಈ ಮೂಲಕ ಗುಜರಾತಿ ಸಂಸ್ಕೃತಿ ಇಡೀ ವಿಶ್ವಕ್ಕೆ ಪರಿಚಯವಾಗುತ್ತಿದೆ. ಇದು ಪ್ರಧಾನಿ ನರೇಂದ್ರ ಮೋದಿ ಅವರ ನಾಯಕತ್ವದಲ್ಲಿ ಸಂಸ್ಕೃತಿ ಮತ್ತು ಸಂಪ್ರದಾಯಕ್ಕೆ ಸಿಗುತ್ತಿರುವ ಪ್ರಾಮುಖ್ಯತೆ. ಗುಜರಾತಿ ಜನರಿಗೆ ಅಭಿನಂದನೆಗಳು ಎಂದು ಎಕ್ಸ್‌ನಲ್ಲಿ ಬರೆದುಕೊಂಡಿದ್ದಾರೆ.

ಗಾರ್ಬಾ ನೃತ್ಯ ಸಾಂಪ್ರದಾಯಿಕ ಮತ್ತು ದೈವೀಕ ನೃತ್ಯ. ದೇವಿಯ ಶಕ್ತಿಯನ್ನು ಪ್ರತಿನಿಧಿಸುವ ಈ ನೃತ್ಯವನ್ನು ನವರಾತ್ರಿ ಸಮಯದಲ್ಲಿ ಪ್ರದರ್ಶಿಸಲಾಗುತ್ತಿದೆ ಎಂದು ಯುನೆಸ್ಕೊ ವೆಬ್‌ಸೈಟ್‌ನಲ್ಲಿ ಹೇಳಲಾಗಿದೆ.

ಬೋಟ್ಸ್‌ವಾನದ ಕಸಾನೆಯಲ್ಲಿ ನಡೆದ ಸಭೆಯಲ್ಲಿ ಈ ನಿರ್ಧಾರ ಕೈಗೊಳ್ಳಲಾಗಿದೆ ಎಂದು ಮೂಲಗಳು ತಿಳಿಸಿವೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.